ಮದ್ದೂರು: ಪಟ್ಟಣದ ಹಳೇಬಸ್ ನಿಲ್ದಾಣದಿಂದ ಶ್ರೀ ಹೊಂಬಾಳಮ್ಮ ದೇವಿಯ ದೇವಸ್ಥಾನದ ಜಾಗ ಉಳಿವಿಗಾಗಿ ವಿವಿಧ ಸಂಘಟನೆಯ ನೂರಾರು ಕಾರ್ಯಕರ್ತರು ಕಾಲ್ನಡಿಗೆಯೊಂದಿಗೆ ಹಳೆ ಎಂಸಿ ರಸ್ತೆಯಲ್ಲಿ ಸಂಚರಿಸಿ ತಾಲೂಕು ಕಚೇರಿ ಬಳಿ ತೆರಳಿ ತಹಶೀಲ್ದಾರ್ ಸೋಮಶೇಖರ್ ರವರಿಗೆ ಮನವಿ ಸಲ್ಲಿಸಿದರು.
ಪ್ರಭಾವಿ ವ್ಯಕ್ತಿಗಳು ಗ್ರಾಮ ಠಾಣಾ ಹಾಗೂ ಹೊಂಬಾಳಮ್ಮ ದೇವಾಲಯವನ್ನು ಅಕ್ರಮವಾಗಿ ಒಡೆಯಲು ಸಂಚು ರೂಪಿಸಿದ್ದಾರೆ. ಕೂಡಲೇ ದಾಖಲೆಗಳನ್ನು ಪರಿಶೀಲಿಸಿ ಸರ್ಕಾರಿ ಜಾಗ ರಕ್ಷಣೆ ಜೊತೆಗೆ ದೇವಾಲಯದ ಜಾಗವನ್ನು ಉಳಿಸಿ ಕೊಡಬೇಕು ಎಂದರು.
ಹೊಂಬಾಳಮ್ಮ ದೇವಾಲಯ ಟ್ರಸ್ಟ್ ಅಧ್ಯಕ್ಷ ಮುತ್ತು ಮಾತನಾಡಿ ಹಳೆ ಬಸ್ ನಿಲ್ದಾಣದ ಬಳಿ 5ಕುಂಟೆ ಗ್ರಾಮ ಠಾಣೆಯನ್ನು ಪುರಸಭಾ ಅಧಿಕಾರಿಗಳು ಕಾನೂನು ಬಾಹಿರವಾಗಿ ಪ್ರಭಾವಿಗಳಿಗೆ ಖಾತೆ ಮಾಡಿಕೊಟ್ಟಿದ್ದು, ಅಕ್ರಮ ಖಾತಿಯಲ್ಲಿ ಭಾಗಿಯಾಗಿರುವ ಪುರಸಭಾ ಅಧಿಕಾರಿಗಳ ಅಮಾನತು ಮಾಡುವುದರ ಜೊತೆಗೆ ಗ್ರಾಮ ಠಾಣಾ ಜಾಗವನ್ನು ರಕ್ಷಣೆ ಮಾಡುವುದರ ಜೊತೆಗೆ ಹೊಂಬಳಮ್ಮ ದೇವಾಲಯವನ್ನು ಉಳಿಸಿಕೊಡಬೇಕೆಂದು ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ಈ ವೇಳೆ ಕೃಷ್ಣ ಕಾರ್ಯದರ್ಶಿ ಸತೀಶ್, ಪದಾಧಿಕಾರಿಗಳಾದ ಅಭಿ, ದಲಿತ ಮುಖಂಡರಾದ ಸುರೇಶ್ ಕಂಠಿ, ಶ್ರೀನಿವಾಸ್, ಮರಿದೇವರು, ನಾಗಭೂಷಣ್, ವಿವಿಧ ಸಂಘಟನೆಯ ಮುಖಂಡರಾದ ನ.ಲಿ ಕೃಷ್ಣ, ಎಂಐ ಪ್ರವೀಣ್, ಅಮರ್ ಬಾಬು, ಟಿ ಆರ್ ಪ್ರಸನ್ನ ಕುಮಾರ್, ಸೇರಿದಂತೆ ಇತರರು ಹಾಜರಿದ್ದರು.