ಗದಗ:ಇಂದು ಗದಗ ಜಿಲ್ಲಾ ಸಾರಿಗೆ ಇಲಾಖೆ ಅಧಿಕಾರಿಗಳ ಬಳಿ ತೆರಳಿ ಆಟೋ ಚಾಲಕರ ಮತ್ತು ಕ್ಯಾಬ್ ಚಾಲಕರ ವತಿಯಿಂದ ನಮಗೆ ಶಕ್ತಿ ಯೋಜನೆಯಿಂದ ಬಹಳ ತೊಂದರೆಯಾಗಿದೆ ನಾವು ಈ ಮುಂಚೆ ಅಲ್ಪ ಸ್ವಲ್ಪ ದುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು ಆದರೆ ಈಗಿನ ಸರ್ಕಾರದ ಗ್ಯಾರಂಟಿ ಯೋಜನೆ ನಮ್ಮೆಲ್ಲರ ಹೊಟ್ಟೆ ಮೇಲೆ ಹೊಡೆದಿದೆ ಎಂದು ಅಲವತ್ತುಕೊಂಡರು.
ಅದರೊಂದಿಗೆ ಇತ್ತೀಚೆಗೆ ಮಾಡಿದ ವಾಹನ ಮೇಲಿನ ಟ್ಯಾಕ್ಸ್ LTT ಮಾಡಿದ್ದಾರೆ ಅದು ನಮಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಅದನ್ನು ಹಿಂದಕ್ಕೆ ತೆಗೆದುಕೊಳ್ಳಿ ಎಂದು ಸರ್ಕಾರಕ್ಕೆ ಸಾರಿಗೆ ಇಲಾಖೆ ಮುಖಾಂತರ ಮನವಿ ಮಾಡಿದರು. ಸರ್ಕಾರ ಇವರ ಮನವಿಗೆ ಸ್ಪಂದಿಸಿ ಬೇಡಿಕೆ ಈಡೇರಿಸುತ್ತಾ ಎಂದು ಕಾದು ನೋಡಬೇಕಿದೆ …