ಬಳ್ಳಾರಿ: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಇಂಗ್ಲೀಷ್ ಅಧ್ಯಯನ ವಿಭಾಗದ ಪೂರ್ಣಕಾಲಿಕ ಪಿಎಚ್.ಡಿ ವಿದ್ಯಾರ್ಥಿ ಮಂಜುನಾಥ್.ಜಿ ಅವರಿಗೆ ಪಿಹೆಚ್‍ಡಿ ಪದವಿ ಲಭಿಸಿದೆ.
ಇಂಗ್ಲೀಷ್ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರಾಬರ್ಟ್ ಜೋಸ್ ಅವರ ಮಾರ್ಗದರ್ಶನದಲ್ಲಿ “ನರೇಟಿವ್ಸ್ ಆಫ್ ಕರಪ್ಶನ್ ಇನ್ ದ ಸೆಲೆಕ್ಟ್ ವಕ್ರ್ಸ್ ಆಫ್ ನಯಾಂತರ ಸಹ್ಗಲ್, ರೋಹಿಂಟನ್ ಮಿಸ್ಟ್ರಿ ಅಂಡ್ ಅರುಣ್ ಜೋಶಿ” ಎಂಬ ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಈ ಮಹಾ ಪ್ರಬಂಧಕ್ಕೆ ಪಿಹೆಚ್‍ಡಿ ಪದವಿ ಪ್ರದಾನ ಮಾಡಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.