Friday, April 11, 2025
Google search engine

Homeರಾಜಕೀಯಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ ನಂತರ ಪರಿಹಾರ ವಿತರಣೆ-ಎನ್ ಚಲುವರಾಯಸ್ವಾಮಿ

ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ ನಂತರ ಪರಿಹಾರ ವಿತರಣೆ-ಎನ್ ಚಲುವರಾಯಸ್ವಾಮಿ

ಮದ್ದೂರು: ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 18 ಸಾವಿರ ದಿಂದ 19 ಕೋಟಿ ಅನುದಾನ ಕೇಳಿದ್ದೇವೆ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ ನಂತರ ಹಂತ ಹಂತವಾಗಿ ಪರಿಹಾರ ವಿತರಿಸುತ್ತೇವೆ‌ ಎಂದರು.

ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಇಂದು ಮದ್ದೂರು ತಾಲ್ಲೂಕಿನ ಆತಗೂರು ಹೋಬಳಿಯ ಆತಗೂರು ಗ್ರಾಮದ ಜಯಮ್ಮ ಅವರು ಜಮೀನು ವೀಕ್ಷಣೆ ಬರ ಪರಿಸ್ಥಿತಿಯಿಂದ ರಾಗಿ ಹಾಗೂ ಮುಸುಕಿನ ಜೋಳ ಬೆಳೆ ಹನಿ ಉಂಟಾಗಿರುವ ಸ್ಥಳ ವೀಕ್ಷಿಸಿ ರೈತರಿಗೆ ಧೈರ್ಯ ತುಂಬಿ, ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.

ನಂತರ ಮಾತನಾಡಿದ ಅವರು ರಾಜ್ಯದ 224 ತಾಲ್ಲೂಕು ಕೂಡ ಬರ ಪೀಡಿತ ತಾಲ್ಲೂಕು ಎಂದು ಘೋಷಣೆಯಾಗಿದೆ. ಈಗಾಗಲೇ ಕೇಂದ್ರ ತಂಡ ರಾಜ್ಯದಲ್ಲಿ ಬರ ಅಧ್ಯಯನ ನಡೆಸಿ, ಕೇಂದ್ರಕ್ಕೆ ವರದಿ ಸಲ್ಲಿಸಿದೆ ಎಂದರು.

ಇಂದಿನ ವರದಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಕೇಂದ್ರ ಸರ್ಕಾರದ ಹಣ ಬಿಡುಗಡೆ ಮಾಡುವುದು ತಡವಾದರೆ, ರಾಜ್ಯ ಸರ್ಕಾರವೇ ರೈತರ ನೆರವಿಗೆ ನಿಲ್ಲಲಿದೆ ಎಂದರು.

ರೈತರ ಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತದೆ. ಕೇಂದ್ರ ತಂಡ ಬೆಳೆ ಸಮಿಕ್ಷೆ ನಡೆಸಿ ವರದಿ ಸಲ್ಲಿಸಿದೆ. ರಾಜ್ಯ ಸರ್ಕಾರದ ಜನರ ಪರ ಕೆಲಸ ಮಾಡುತ್ತದೆ.

ನಮ್ಮ ಜಿಲ್ಲೆಯಿಂದ ಬರ ಪರಿಹಾರಕ್ಕೆ 48 ಕೋಟಿಗೆ ನಾವು ಕೇಂದ್ರಕ್ಕೆ ಪರಿಹಾರಕ್ಕೆ ವರದಿ ಸಲ್ಲಿಸಿದೆ ಎಂದರು

ಈಗಾಗಲೇ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳ ಖಾತೆಗೆ ಹಣ ಹಾಕಲಾಗಿದೆ ಆದೇಶ ಆಗುವವರೆಗೂ ಪರಿಹಾರ ನೀಡುವಂತಿಲ್ಲ ಸಾರ್ವಜನಿಕವಾಗಿ ಕುಡಿಯುವ ನೀರಿಗೆ. ಜಾನುವಾರುಗಳ. ಮೇವಿಗೆ . ಅಕೌಂಟಲ್ಲಿ ಇಡಲಾಗಿದೆ ಸದ್ಯದಲ್ಲೇ ರೈತರಿಗೆ ಪರಿಹಾರ ನೀಡಲು ಈ ವಾರದಲ್ಲಿ ಬಿಡುಗಡೆ ಮಾಡಿಸಲಾಗುತ್ತದೆ ಎಂದರು.

ಕಳೆದ ಆರು ತಿಂಗಳಿಂದ ಪಕ್ಷಕ್ಕೆ ಒಬ್ಬರನ್ನು ಅಧ್ಯಕ್ಷರು ಮಾಡಲು ವಿರೋಧ ಪಕ್ಷದ ನಾಯಕರನ್ನು ಮಾಡಲು ಅವರಿಂದ ಸಾಧ್ಯವಾಗಿರಲಿಲ್ಲ ಹೊಸದಾಗಿ ಅಧ್ಯಕ್ಷರಾಗಿ ವಿರೋಧ ಪಕ್ಷದಹಾಗೆ ಆಯ್ಕೆಯಾಗಿದ್ದಾರೆ ಹೊಸ ಮದುವೆಯನ್ನು ಕಂಡು ದೇವಸ್ಥಾನ ಜಾತ್ರೆ ಗಳಿಗೆ ಹೋಗುವ ಅಭ್ಯಾಸ ಇದೆ ಬರಲಿ ಬಿಡಿ ಇದರಿಂದ ಯಾವುದೇ ರಾಜಕೀಯ ಬದಲಾವಣೆ ಆಗುವುದಿಲ್ಲ ಎಂದು ಪರೋಕ್ಷವಾಗಿ ವ್ಯಂಗ್ಯವಾಡಿದರು. ಹಾಡಿದರು.

ಈಗ ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿಯವರೇ ಗೆಜ್ಜಲಗರಿಗೆ ಬಂದು ಸಮಾವೇಶ ಮಾಡಿದ್ರು ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಇನ್ನು ಇವರಿಬ್ಬರದಿಂದ ರಾಜ್ಯದಲ್ಲಿ ಯಾವುದೇ ಪರಿಣಾಮ ಸ್ವಲ್ಪ ಆಗುವುದಿಲ್ಲ ಎಂದರು.

ಜನ ಕಾಂಗ್ರೆಸ್ ಪರ ಇದ್ದಾರೆ ಕಾಂಗ್ರೆಸ್ ಅಭಿವೃದ್ಧಿಯ ಮೆಚ್ಚಿಕೊಂಡಿದ್ದಾರೆ ನುಡಿದಂತೆ ನಾವು ಸಹ ನಡೆದುಕೊಳ್ಳುತ್ತಿದ್ದೇವೆ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ ಎಂಬ ವಿಶ್ವಾಸ ಇದೆ ಎಂದರು.

ಇದೇ ಸಂಧರ್ಭದಲ್ಲಿ ಮದ್ದೂರು ಶಾಸಕ ಕೆ ಎಂ ಉದಯ್.ತಾಲ್ಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ. ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮೇಗೌಡ. ಜಿಲ್ಲಾಧಿಕಾರಿ ಡಾ: ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular