ಬಳ್ಳಾರಿ: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಪವನ್ ಕುಮಾರ್.ಎಸ್.ಎಸ್ ಅವರಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.
ವಿವಿಯ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರು ಮತ್ತು ಪ್ರಸ್ತುತ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರು ಆದ ಪ್ರೊ.ರಮೇಶ್ ಓಲೇಕಾರ್ ಅವರ ಮಾರ್ಗ ದರ್ಶನದಲ್ಲಿ ಇಂಪ್ಯಾಕ್ಟ್ ಅಸ್ಸೆಸ್‌ಮೆಂಟ್ ಆಫ್ ರೂರಲ್ ಟೂರಿಸಂ ಆನ್ ದಿ ಸೋಶಿಯೋ ಕಲ್ಚರಲ್ ಅಂಡ್ ಎಕನಾಮಿಕ್ ಸ್ಪೀಯರ್ಸ್ ಆಫ್ ಲೋಕಲ್ ಕಮ್ಯೂನಿಟಿ – ಎ ಸ್ಟಡಿ ಆಫ್ ಬಳ್ಳಾರಿ ಅಂಡ್ ಕೊಪ್ಪಳ್ ಡಿಸ್ಟ್ರಿಕ್ಟ್ ಎಂಬ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಲಾಗಿದೆ ಎಂದು ವಿವಿಯ ಪರೀಕ್ಷಾ ವಿಭಾಗವು ಪ್ರಕಟಣೆಯಲ್ಲಿ ತಿಳಿಸಿದೆ.