Friday, April 18, 2025
Google search engine

Homeರಾಜಕೀಯಸ್ಪೀಕರ್ ಪೀಠದ ಎದುರು ಕಾಂಗ್ರೆಸ್ ನಾಯಕರ ಜೊತೆ ಫೋಟೋ: ಅಧಿವೇಶನ ನಡೆಯುವಾಗ ತೆಗೆದ ಫೋಟೋ ಅಲ್ಲ...

ಸ್ಪೀಕರ್ ಪೀಠದ ಎದುರು ಕಾಂಗ್ರೆಸ್ ನಾಯಕರ ಜೊತೆ ಫೋಟೋ: ಅಧಿವೇಶನ ನಡೆಯುವಾಗ ತೆಗೆದ ಫೋಟೋ ಅಲ್ಲ ಎಂದ ಯು.ಟಿ.ಖಾದರ್

ಮಂಗಳೂರು(ದಕ್ಷಿಣ ಕನ್ನಡ): ಸ್ಪೀಕರ್ ಪೀಠದ ಎದುರು ಕಾಂಗ್ರೆಸ್ ನಾಯಕರ ಜೊತೆ ಖಾದರ್ ಫೋಟೋ ವೈರಲ್ ವಿಚಾರವಾಗಿ ಮಂಗಳೂರಿನಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಸ್ಪಷ್ಟನೆ ನೀಡಿದ್ದು, ಅಧಿವೇಶನ ನಡೆಯುವಾಗ ತೆಗೆದ ಫೋಟೋ ಅಲ್ಲ, ಅಧಿವೇಶನ ನಡೆಯುವ ಮೊದಲು ರಾತ್ರಿ ತೆಗೆದ ಫೋಟೋ ಅದು ಎಂದು ಹೇಳಿದ್ದಾರೆ.

ನಾನು ಅಧಿವೇಶನದ ಮೊದಲು ಮೈಕ್ ಚೆಕ್ ಮಾಡಲು ರಾತ್ರಿ ಹೋಗಿದ್ದೆ. ಆಗ ಮಂಗಳೂರಿನ ಮಾಜಿ ಮೇಯರ್ ಒಬ್ಬರು ತೆಗೆದ ಫೋಟೋ. ವಿಧಾನಸೌಧಕ್ಕೆ ಅತಿಥಿಗಳು, ವಿದ್ಯಾರ್ಥಿಗಳು ಬಂದಾಗಲೂ ಅಲ್ಲೇ ಫೋಟೋ ತೆಗೀತಿವಿ. ಇದರಲ್ಲಿ ‌ತಪ್ಪು ಹುಡುಕೋ ಪ್ರಯತ್ನ ಬೇಡ, ಫೋಟೋ ತೆಗೀಬಾರದು ಅಂತ ಇಲ್ಲ ಎಂದರು.

ಶಿರೂರು ಘಟನೆ ಬಗ್ಗೆ ಎಲ್ಲರಿಗೂ ಬಹಳಷ್ಟು ಬೇಸರ ಇದೆ. ಕೇರಳದ ಶಾಸಕರು, ಎಂಪಿಗಳು ನನ್ನನ್ನು ಸಂಪರ್ಕ ಮಾಡಿದ್ದಾರೆ. ಆದಷ್ಟು ಬೇಗ ಮೃತದೇಹ ಸಿಗಲಿ, ಗೌರವಯುತ ಅಂತ್ಯ ಸಂಸ್ಕಾರ ಅಗಲಿ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular