Saturday, April 19, 2025
Google search engine

Homeರಾಜ್ಯಸುದ್ದಿಜಾಲಛಾಯಾಗ್ರಾಹಕರು ಸಮಾಜದ ಕಣ್ಣುಗಳಿದ್ದಂತೆ : ಶಾಸಕ ಡಿ.ರವಿಶಂಕರ್

ಛಾಯಾಗ್ರಾಹಕರು ಸಮಾಜದ ಕಣ್ಣುಗಳಿದ್ದಂತೆ : ಶಾಸಕ ಡಿ.ರವಿಶಂಕರ್

ಕೆ.ಆರ್.ನಗರ: ನಿತ್ಯ ನಡೆಯುವ ಘಟನೆಗಳು ಮತ್ತು ಕಾರ್ಯಕ್ರಮಗಳ ಚಿತ್ರ ತೆಗೆಯುವ ಛಾಯಾಗ್ರಾಹಕರು ಸಮಾಜದ ಕಣ್ಣುಗಳಿದ್ದಂತೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಅಕ್ಷತಾ ಹಾಲ್‌ನಲ್ಲಿ ಪೋಟೋ ಮತ್ತು ವಿಡಿಯೋ ಗ್ರಾಪರ್ ಅಸೋಸಿಯೇಷನ್ ವತಿಯಿಂದ ಹೊರ ತಂದಿರುವ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಸಂಘದ ಗೌರವಾಧ್ಯಕ್ಷನಾಗಿರುವ ನಾನು ಜವಬ್ದಾರಿಯಿಂದ ಕೆಲಸ ನಿರ್ವಹಿಸಿ ಸಂಘದ ಸದಸ್ಯರ ಹಿತ ಕಾಯಲು ಬದ್ದನಾಗಿದ್ದೇನೆ ಎಂದರು.
ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಸರ್ಕಾರದಿಂದ ನಿವೇಶನ ಮಂಜೂರು ಮಾಡಿಸಿಕೊಡುವುದರ ಜತೆಗೆ ಅನುದಾನ ಕೊಡಿಸಿ ಭವನ ನಿರ್ಮಾಣಕ್ಕೆ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದ ಶಾಸಕರು ಸಂಘವನ್ನು ಮತ್ತಷ್ಟು ಬಲಗೊಳಿಸಿ ಆರ್ಥಿಕ ಸಂಕಷ್ಟದಲ್ಲಿರುವ ಸದಸ್ಯರಿಗೆ ಸಹಾಯ ಮಾಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಅಸೋಸಿಯೇಷನ್ ವತಿಯಿಂದ ಶಾಸಕ ಡಿ.ರವಿಶಂಕರ್ ಅವರನ್ನು ಸನ್ಮಾನಿಸಿ ಮನವಿ ಪತ್ರ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಮಹೇಶ್, ತಾಲೂಕು ಅಧ್ಯಕ್ಷ ವಿಶ್ವನಾಥ್, ಉಪಾಧ್ಯಕ್ಷರಾದ ಎಂ.ಡಿ.ಮಹದೇವ್, ಸಂತೋಷ್, ಕಾರ್ಯದರ್ಶಿ ಶ್ರೀನಿವಾಸ್, ಸಹಕಾರ್ಯದರ್ಶಿ ಜಯರಾಜ್, ಖಜಾಂಚಿ ಯೋಗೀಶ್, ಸಂಘಟನಾ ಕಾರ್ಯದರ್ಶಿ ರವಿ, ಪತ್ರಿಕಾಕಾರ್ಯದರ್ಶಿ ಎಂ.ಪಿ.ಸoತೋಷ್, ನಿರ್ದೇಶಕರಾದ ದೊಡ್ಡೇಕೊಪ್ಪಲುಕೃಷ್ಣ, ಉಮಾಶಂಕರ್, ಹರೀಶ್, ಚರ‍್ನಹಳ್ಳಿರವಿ, ಮಂಜುನಾಥ್, ಕೆ.ಪಿ.ವಿಜಯ್, ಸಂಘದ ಮಾಜಿ ಅಧ್ಯಕ್ಷ ಕೆ.ಆರ್.ಶ್ರೀನಿವಾಸ್ ಇದ್ದರು.

RELATED ARTICLES
- Advertisment -
Google search engine

Most Popular