ಮಂಡ್ಯ: ಜಿಲ್ಲೆಯಲ್ಲಿ ಕಾವೇರಿ ಕಿಚ್ಚು ಕಾವೇರಿದ್ದು, ಕಾವೇರಿಗಾಗಿ ರಸ್ತೆಗಿಳಿದು ಛಾಯಾಗ್ರಾಹಕರು ಹೋರಾಟ ನಡೆಸಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಖಂಡಿಸಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ರೈತ ಹಿತರಕ್ಷಣಾ ಸಮಿತಿ ಧರಣಿಗೆ ಪ್ರತಿಭಟನೆಗೆ ಛಾಯಾಗ್ರಾಹಕ ಸಂಘ ಬೆಂಬಲ ವ್ಯಕ್ತಪಡಿಸಿದೆ.
ಬೆಂ-ಮೈ ಹೆದ್ದಾರಿ ತಡೆದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ತಮ್ಮ ತಮ್ಮ ಅಂಗಡಿ(ಸ್ಟೂಡಿಯೋ) ಬಂದ್ ಮಾಡಿ ಹೋರಾಟದಲ್ಲಿ ಛಾಯಾಗ್ರಾಹಕರು ಭಾಗಿಯಾಗಿದ್ದಾರೆ.
ರಾಜ್ಯ ಸರ್ಕಾರದ ರೈತರ ಜೊತೆ ಆಟವಾಡ್ತಿದೆ. ಕುಡಿಯಲು ನೀರಿಲ್ಲ, ತಮಿಳುನಾಡಿಗೆ ನೀರು ಕೊಡ್ತಿದ್ದಾರೆ. ರೈತರ ಬಗ್ಗೆ ಸ್ವಲ್ಪ ರಾಜ್ಯ ಸರ್ಕಾರ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಕಾವೇರಿ ನಮ್ಮೆಲ್ಲರ ಹಕ್ಕು ನಾವು ಕಾವೇರಿಗಾಗಿ ಕೈ ಜೋಡಿಸಿದ್ದೇವೆ. ತಕ್ಷಣವೇ ತಮಿಳುನಾಡಿಗೆ ಹೋಗ್ತಿರೋ ನೀರು ನಿಲ್ಲಿಸುವಂತೆ ಆಗ್ರಹಿಸಿದರು.