ಪಿರಿಯಾಪಟ್ಟಣ:ಪಿರಿಯಾಪಟ್ಟಣ ತಾಲೂಕು ವ್ಯಾಪ್ತಿಯಲ್ಲಿ ಸಮಾಜ ಕಲ್ಯಾಣ/ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆಸಲ್ಪಡುತ್ತಿರುವ ವಿದ್ಯಾರ್ಥಿ ನಿಲಯ/ ಆಶ್ರಮ ಶಾಲೆಗಳಿಗೆ ಪ್ರವೇಶಾತಿ ಸಂಬಂಧ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ/ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು ಪ್ರವೇಶಾತಿ ಅರ್ಜಿಗಳನ್ನು ನಿಲಯ/ ಆಶ್ರಮ ಶಾಲೆಗಳಿಂದ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ವಿದ್ಯಾರ್ಥಿ ನಿಲಯಗಳಿಗೆ ಸಲ್ಲಿಸಲು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್ ಕೋರಿದ್ದಾರೆ.
ಪಿರಿಯಾಪಟ್ಟಣ ಟೌನ್ ಬೈಲಕುಪ್ಪೆ ಪಂಚವಳ್ಳಿ ರಾವಂದೂರು ಗ್ರಾಮಗಳಲ್ಲಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಮೆಟ್ರಿಕ್ ಪೂರ್ವ ಬಾಲಕರ/ ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ 5 ರಿಂದ 10ನೇ ತರಗತಿಯವರೆಗೆ ಹಾಗು ಅಬ್ಬಳತಿ ಮುತ್ತೂರು ಕಾಲೋನಿ ಮತ್ತು ದೊಡ್ಡ ಹೊಸೂರು ಗ್ರಾಮಗಳಲ್ಲಿನ ಪರಿಶಿಷ್ಟ ವರ್ಗದ ಆಶ್ರಮ ಶಾಲೆಗಳಲ್ಲಿ 1 ರಿಂದ 7 ನೇ ತರಗತಿಯವರೆಗೆ ಮತ್ತು ಪಿರಿಯಾಪಟ್ಟಣ ಟೌನ್ ನಲ್ಲಿರುವ ಮೆಟ್ರಿಕ್ ನಂತರದ ನಂತರದ ಬಾಲಕರ ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಪಿಯುಸಿ ಐಟಿಐ ಪದವಿ ತರಗತಿಗಳಿಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು ಹೆಚ್ಚಿನ ಮಾಹಿತಿಗಾಗಿ ಪಿರಿಯಾಪಟ್ಟಣ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಹಾಗು ಬಿ.ಟಿ ಮಹದೇವ 9449131475, ಜೂಲಿಯಟ್ 7892693275, ಲಲಿತಾ 9886368125, ದೇವಿ 7760456705, ಯಶೋಧ 9972593675 ಸಂಪರ್ಕಿಸುವಂತೆ ಕೋರಿದ್ದಾರೆ.