Monday, April 21, 2025
Google search engine

Homeರಾಜ್ಯಸುದ್ದಿಜಾಲಪಿರಿಯಾಪಟ್ಟಣ:ಸಮುದಾಯ ಭವನ ಉದ್ಘಾಟನೆ

ಪಿರಿಯಾಪಟ್ಟಣ:ಸಮುದಾಯ ಭವನ ಉದ್ಘಾಟನೆ

ಪಿರಿಯಾಪಟ್ಟಣ: ತಾಲ್ಲೂಕಿನ ಜವನಿಕುಪ್ಪೆ ಗ್ರಾಮದಲ್ಲಿ ಐಟಿಸಿ ಸಂಸ್ಥೆ ವತಿಯಿಂದ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ದೊಡ್ಡಮ್ಮತಾಯಿ ಸಮುದಾಯ ಭವನದ ಉದ್ಘಾಟನೆ ನಡೆಯಿತು.
ಈ ವೇಳೆ ಐಟಿಸಿ ಸಂಸ್ಥೆ ಉಪಾಧ್ಯಕ್ಷ ಕೆ.ಕೃಷ್ಣಕುಮಾರ್ ಅವರು ಮಾತನಾಡಿ ಐಟಿಸಿ ಸಂಸ್ಥೆ ವತಿಯಿಂದ ರೈತರ ಅಭಿವೃದ್ಧಿಗಾಗಿ ಹಲವು ಸಾಮಾಜಿಕ ಕಾರ್ಯಕ್ರಮಗಳು ಜಾರಿಯಲ್ಲಿದ್ದು ಅವುಗಳ ಸದ್ಬಳಕೆಯಾಗಬೇಕಿದೆ, ರೈತರು ಉತ್ತಮ ಗುಣಮಟ್ಟದ ತಂಬಾಕು ಬೆಳೆದು ಹೆಚ್ಚು ಲಾಭಗಳಿಸಿ ಆರ್ಥಿಕವಾಗಿ ಮುಂದುವರೆಯುವಂತೆ ಕೋರಿದರು.
ಈ ಸಂದರ್ಭ ಐಟಿಸಿ ಸಂಸ್ಥೆಯ ರಾಜಶೇಖರ್, ಶ್ರೀನಿವಾಸ್ ರೆಡ್ಡಿ , ಪೂರ್ಣೇಶ್, ಚೆನ್ನವೀರೇಶ್, ಕೆ.ಟಿ ವೆಂಕಟೇಶ್ ಸಿಬ್ಬಂದಿ ಮೂರ್ತಿ, ಶೇಷ, ಚಂದ್ರು, ಪ್ರತಾಪ್ ಹಾಗೂ ಗ್ರಾಮದ ಮುಖಂಡರಾದ ಕುಬೇರ, ಶ್ರೀನಿವಾಸ್, ಚನ್ನಕೇಶವ ಹಾಗು ರೈತರು ಇದ್ದರು.

RELATED ARTICLES
- Advertisment -
Google search engine

Most Popular