Saturday, April 12, 2025
Google search engine

Homeರಾಜ್ಯಸುದ್ದಿಜಾಲಪಿರಿಯಾಪಟ್ಟಣ: ಎಸ್‌ಎಮ್‌ಎಸ್ ವಿದ್ಯಾಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಪಿರಿಯಾಪಟ್ಟಣ: ಎಸ್‌ಎಮ್‌ಎಸ್ ವಿದ್ಯಾಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್
ಬೆಟ್ಟದಪುರ : ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಎಸ್‌ಎಮ್‌ಎಸ್ ವಿದ್ಯಾಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಬಹಳ ಸಡಗರದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎವಿ ಛಾಯ ಮಾತನಾಡಿ ಕೃಷ್ಣ ಜನ್ಮಾಷ್ಟಮಿಯನ್ನು ಭಾರತದಲ್ಲಿ ಆಚರಿಸುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಧರ್ಮದ ವಿಚಾರದಲ್ಲಿ ನ್ಯಾಯ ಒದಗಿಸಿಕೊಟ್ಟು ಧರ್ಮಕ್ಕೆ ಜಯ ತಂದುಕೊಟ್ಟ ಕೀರ್ತಿ ಕೃಷ್ಣನಿಗೆ ಸಲ್ಲುತ್ತದೆ ಹಾಗೂ ಅದೇ ರೀತಿ ವಿದ್ಯಾರ್ಥಿಗಳು ಸಹ ಪ್ರಾಮಾಣಿಕತೆಯಿಂದ ಇದ್ದರೆ ನಿಮಗೂ ಸಹ ಜಯ ಸಿಗುತ್ತದೆ ಎಂದು ತಿಳಿಸಿಕೊಟ್ಟರು.
ಬಳಿಕ ಮಾತನಾಡಿದ ಸಂಸ್ಥೆಯ ಆಡಳಿತ ಅಧಿಕಾರಿಯವರಾದ ಬಿ ವಿ ಮಂಜುನಾಥ್ ಮಾತನಾಡಿ ವಿದ್ಯಾರ್ಥಿಗಳ ಜೀವನದಲ್ಲಿ ರಾಧಾಕೃಷ್ಣರಂತಹ ವೇಷಭೂಷಣಗಳನ್ನು ಹಾಕಿ ಹಿಂದಿನ ದಿನದ ಮಹತ್ವವನ್ನು ಇಂದು ಎಲ್ಲರಿಗೂ ಸಾರಿದ್ದಾರೆ. ಇದು ಅತ್ಯುತ್ತಮವಾದ ಸಂದೇಶ.ಜಗತ್ತಿಗೆ ಕೃಷ್ಣಂ ವಂದೇ ಜಗದ್ಗುರು ಎಂಬುದು ಇಂದು ಈ ಕಾರ್ಯಕ್ರಮದ ಮೂಲಕ ತಿಳಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ತೀರ್ಪುಗಾರರಾಗಿ ಹಾಗೂ ಶಾಲೆಯ ಪೋಷಕರಾದ ಆಗಮಿಸಿದ ಶ್ರೀಮತಿ ಮಮತಾ ಹಾಗೂ ಜಯಶೀಲರವರು ಮಕ್ಕಳ ಬೆಳವಣಿಗೆಗೆ ಹಿಂದಿನ ಕಾಲದ ಇತಿಹಾಸವನ್ನು ತಿಳಿಸುವ ಕೆಲಸ ಹಾಗೂ ಧರ್ಮದಲ್ಲಿ ಜಯದ ವಿಚಾರವನ್ನು ತಿಳಿಸುವ ಕೆಲಸ ಮಾಡುತ್ತಿರುವುದು ಎಲ್ಲರಿಗೂ ಸಂತೋಷದ ವಿಷಯ ಎಂದು ತಮ್ಮ ಅನಿಸಿಕೆಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಒಟ್ಟು ೪೮ ವಿದ್ಯಾರ್ಥಿಗಳು ಭಾಗವಹಿಸಿದ್ದು ಇದರಲ್ಲಿ ಅತ್ಯುತ್ತಮವಾಗಿ ವೇಷಭೂಷಣ ತೊಟ್ಟು ಕೃಷ್ಣನ ಗೀತೆ ಹಾಡಿದ ಮಕ್ಕಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ನೀಡಿ ಅಭಿನಂದಿಸಿದರು ಮತ್ತು ಉಳಿದ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ನೀಡಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿಮುಖ್ಯ ಶಿಕ್ಷಕರಾದ ಸ್ವಾಮಿ ಡಿ ಎನ್ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ವೆಂಕಟೇಶ್ ಎಸ್ ಆರ್. ಪ್ರಾಂಶುಪಾಲರಾದ ರಾಜು ಶಿಕ್ಷಕಿಯರಾದ ಶಾಲಿನಿ, ಶ್ವೇತ ,ಪವಿತ್ರ ಅನಿತಾ, ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular