ಪಿರಿಯಾಪಟ್ಟಣ: ಬೆಕ್ಕರೆ ಗ್ರಾಮದಲ್ಲಿ ಶ್ರೀ ಮಹದೇಶ್ವರ ಸ್ವಾಮಿಯ ತೋಟದ ಆರಾಧನಾ ಮಹೋತ್ಸವ ಸಾಂಪ್ರದಾಯಿಕವಾಗಿ ವಿಜೃಂಭಣೆಯಿಂದ ಜರುಗಿತು.
ಪ್ರತಿವರ್ಷ ಶಿವರಾತ್ರಿ ಹಬ್ಬದ ಸಂದರ್ಭ ಬೆಕ್ಕರೆ ಗ್ರಾಮದಲ್ಲಿ ತೋಟದ ಆರಾಧನೆ ನಡೆಯುತ್ತದೆ ಇದಕ್ಕೆ ತೋಟದಲ್ಲಿ ಊಟ ಎಂದೆ ಹೆಸರಿದೆ, ಗ್ರಾಮದ ಮುಖಂಡರಾದ ಟೈಲರ್ ಮಲ್ಲಿಕಾರ್ಜುನಾರಾಧ್ಯ ಕುಟುಂಬದವರು ಹಿಂದಿನಿಂದಲೂ ಮಹದೇಶ್ವರ ಸ್ವಾಮಿ ಆರಾಧನಾ ಮಹೋತ್ಸವ ನಡೆಸಿಕೊಂಡು ಬರುತ್ತಿದ್ದು, ಈ ವರ್ಷವೂ ಗ್ರಾಮಸ್ಥರಿಂದ ಅಡುಗೆ ತಯಾರಿಸಲು ಕೈಲಾದ ದವಸ ಧಾನ್ಯ ಸಂಗ್ರಹಿಸಿ ಗ್ರಾಮದ ಹೊರವಲಯದ ತೋಟದಲ್ಲಿ ಬಾಣಸಿಗರಾದ ಭಾಸ್ಕರ್ ಆಚಾರ್ ನೇತೃತ್ವದಲ್ಲಿ ಅಡುಗೆ ತಯಾರಿಸಲಾಯಿತು.
ಪುರೋಹಿತರಾದ ಕೆ.ಎಸ್ ಷಣ್ಮುಖಾರಾಧ್ಯ ಅವರು ಪ್ರಥಮವಾಗಿ ಗಂಗಾ ಪೂಜೆಯೊಂದಿಗೆ ಶ್ರೀ ಮಹದೇಶ್ವರ ಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ನಡೆಸಿದ ಬಳಿಕ ಮಹಾಮಂಗಳಾರತಿ ನಡೆಸಿ ಅನ್ನ ಸಂತರ್ಪಣೆಗೆ ಚಾಲನೆ ನೀಡಲಾಯಿತು ತದನಂತರ ಭಕ್ತರ ಉಗೆ ಮಾದಪ್ಪ ಜಯ ಘೋಷದೊಂದಿಗೆ ಮಹದೇಶ್ವರ ಸ್ವಾಮಿ ವಿಗ್ರಹವನ್ನು ತೋಟದಿಂದ ಟೈಲರ್ ಮಲ್ಲಿಕಾರ್ಜುನಾರಾಧ್ಯ ಅವರ ಮನೆಗೆ ತಂದು ಪೂಜೆ ಸಲ್ಲಿಸಲಾಯಿತು.

ಬೆಕ್ಕರೆ ಭುವನಹಳ್ಳಿ ಕೊಣಸೂರು ಬೇಟೆಗೌಡನಕೊಪ್ಪಲು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ತೋಟದ ಆರಾಧನೆಯಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದರು.ಗ್ರಾಮದ ಶ್ರೀ ಬಾಲಚಂದ್ರ ಬಸವೇಶ್ವರ ಸ್ವಾಮಿ, ನವಗ್ರಹ, ಶ್ರೀ ಕಾಳಿಕಾಂಬ, ಮೂರುರಮ್ಮ, ಲಕ್ಷ್ಮಿ ದೇವಾಲಯಗಳಲ್ಲಿಯೂ ಪೂಜೆ ಜರುಗಿತು.