ಮಂಡ್ಯ: ಪಿತೃಪಕ್ಷದ ಆಚರಣೆ ಹಿನ್ನಲೆ ಶ್ರೀರಂಗಪಟ್ಟಣಕ್ಕೆ ಭಕ್ತರ ದಂಡು ಹರಿದು ಬಂದಿದೆ.
ಕಾವೇರಿ ನದಿ ತಟದಲ್ಲಿ ಅಗಲಿದ ತಮ್ಮ ಕುಟುಂಬದವರಿಗೆ ಆಸ್ತಿಕರಿಂದ ತಿಲ ತರ್ಪಣ ನೀಡಿ,
ಹೋಮ,ಪಿಂಡ ಪ್ರದಾನ ಮಾಡಿ ಶ್ರಾದ್ದ ಕಾರ್ಯ ಮಾಡಿದ್ದಾರೆ.
ಶ್ರೀರಂಗಪಟ್ಟಣದ ಸಂಗಮ, ಪಶ್ಚಿಮವಾಹಿನಿ, ಸ್ನಾನಘಟ್ಟ, ಘೋಸಾಯ್ ಘಾಟ್ ನಲ್ಲಿ ಜನರು ತುಂಬಿ ತುಳುಕುತ್ತಿದ್ದಾರೆ.

ರಾಜ್ಯವು ಸೇರಿದಂತೆ ಹೊರ ರಾಜ್ಯದ ವಿವಿಡೆದೆಯಿಂದ ಜನಸ್ತೋಮ ಆಗಮಿಸಿದೆ. ಪಿತೃಪಕ್ಷದಲ್ಲಿ ಅಗಲಿದವರಿಗೆ ಪಿಂಡ ಪ್ರದಾನ ಮಾಡಿ ತಿಲತರ್ಪಣ ಅರ್ಪಿಸಿದರೆ ಕುಟುಂಬಕ್ಕೆ ಒಳಿತಾಗಲಿದೆ ಅನ್ನುವ ಪ್ರತೀತಿ ಇದೆ. ಈ ಹಿನ್ನಲೆಯಲ್ಲಿ ಸಾವಿರಾರು ಜನರಿಂದ ಶ್ರಾದ್ಧ ಕಾರ್ಯ ಮಾಡಲಾಗುತ್ತಿದೆ.
ಅಗಲಿದ ತಮ್ಮ ಪೂರ್ವಜನರಿಗೆ ಪುಣ್ಯ ನದಿ ಕಾವೇರಿ ಎಳ್ಳು ನೀರು ಬಿಟ್ಟು ತಿಲತರ್ಪಣ ಅರ್ಪಣೆ ಮಾಡಲಾಗಿದ್ದು, ಹೆಚ್ಚಿನ ಜನರ ಆಗಮನದಿಂದ ಪಟ್ಟಣದಲ್ಲಿ ಸಂಚಾರ ದಟ್ಟಣೆ ಹೆಚ್ಚಳವಾಗಿದೆ. ಕಾವೇರಿ ನದಿ ತಟದ ಸಮೀಪದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.