ಮೈಸೂರು,ಜುಲೈ ೧೪: ಮೈಸೂರಿನ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಹಾಗೂ ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳ ಹಿತರಕ್ಷಣ ಸಮಿತಿ ಸಹಯೋಗದಲ್ಲಿ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಪ್ಲಾಸ್ಟಿಕ್ ಮುಕ್ತ ಜಾಗೃತಿ, ತ್ಯಾಜ್ಯ ನಿರ್ವಹಣೆ , ಪರಿಸರ ಸಂರಕ್ಷಣೆಯ ಜಾಗೃತಿ ತರಬೇತಿ ಮತ್ತು ಅಭಿಯಾನ ಹಾಗೂ ಬಡಾವಣೆಯಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಶ್ರೀರಾಂಪುರದ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಹಮ್ಮಿ ಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಾದ ಶ್ರೀಧರ್ ಎಂ ಬಡಾವಣೆಯ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿ ಶ್ರೀರಾಂಪುರ ಪಟ್ಟಣ ಪಂಚಾಯಿತಿಯು ತನ್ನ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಲಾಗುತ್ತಿದೆ ಇದಕ್ಕೆ ನಿವಾಸಿಗಳ ಸಂಪೂರ್ಣ ಸಹಕಾರ ಬೇಕು, ತಾವುಗಳು ಕಸವನ್ನು ಖಾಲಿ ನಿವೇಶನಗಳಲ್ಲಿ ಹಾಗೂ ರಸ್ತೆಗಳಲ್ಲಿ ಎಸೆಯದೆ ಪಟ್ಟಣ ಪಂಚಾಯಿತಿಯಿಂದ ಕಳಿಸುವ ತ್ಯಾಜ್ಯ ಸಂಗ್ರಹ ವಾಹನಕ್ಕೆ ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಹಾಕಬೇಕು.
ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ ತಾವುಗಳು ಏಕ ಬಳಕೆ ವಸ್ತುಗಳನ್ನು ಬಳಸುವುದು ಕಡಿಮೆ ಮಾಡಿ ಪರ್ಯಾಯ ವಸ್ತುಗಳನ್ನು ಬಳಸಬೇಕು. ಪಟ್ಟಣ ಪಂಚಾಯಿತಿಯು ನೀಡುತ್ತಿರುವ ಗಿಡಗಳಿಗೆ ತಮ್ಮ ಮನೆಯಲ್ಲಿ ಹಸಿಕಸಗಳನ್ನು ಶೇಖರಿಸಿ ಗೊಬ್ಬರ ಮಾಡಿ ಈ ಗಿಡಗಳಿಗೆ ಬಳಸಿದರೆ ಹಸಿಕಸಗಳನ್ನು ಮರು ಬಳಸಿದಂತೆ ಆಗುತ್ತದೆ. ಗಿಡಗಳನ್ನು ಕಾಪಾಡುವುದು ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳ ಹಿತರಕ್ಷಣ ಸಮಿತಿಯ ಸದಸ್ಯರ ಜವಾಬ್ದಾರಿ ಆಗಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯ ಆರೋಗ್ಯಾಧಿಕಾರಿ ಪರಮೇಶ್ವರ್ , ಸಮುದಾಯ ಅಧಿಕಾರಿ ಶ್ರೀನಿವಾಸ್, ಕಂದಾಯ ನಿರೀಕ್ಷಕ ಬಾಲಾಜಿ, ಕರ ಸಂಗ್ರಹಗಾರ ಕುಮಾರ್, ಮೂಕಾಂಬಿಕಾ ಸಮೃದ್ದಿ ಬಡಾವಣೆಯ ಉಪಾಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿ ನಾಗಭೂಷಣ ಆಚಾರ್, ನಿರ್ದೇಶಕರಾದ ಮಹೇಶಪ್ಪ ಪಿ.ಟಿ., ಖಜಾಂಚಿ ನಾಗರಾಜ್, ಪುನೀತ್ , ನಿರ್ಮಲ, ಶೈಲಜಾ, ಸರಸ್ವತಿ ಹಾಗೂ ತೇಜಸ್ ಹಾಜರಿದ್ದರು.