Sunday, August 10, 2025
Google search engine

Homeರಾಜ್ಯಸುದ್ದಿಜಾಲನಗೆಮುತ್ತುಗಳ ನಾಟಕಕಾರ ಟಿ.ಪಿ. ಕೈಲಾಸಂ – ಕನ್ನಡಿಗರ ಹೆಮ್ಮೆ, ಸಾಹಿತ್ಯ ಲೋಕದ ಅಮೂಲ್ಯ ರತ್ನ: ಸುರೇಶ್...

ನಗೆಮುತ್ತುಗಳ ನಾಟಕಕಾರ ಟಿ.ಪಿ. ಕೈಲಾಸಂ – ಕನ್ನಡಿಗರ ಹೆಮ್ಮೆ, ಸಾಹಿತ್ಯ ಲೋಕದ ಅಮೂಲ್ಯ ರತ್ನ: ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ಕನ್ನಡ ಸಾಹಿತ್ಯ ಲೋಕದ ಅಪರೂಪದ ಹಾಗೂ ಜನಪ್ರಿಯವಾದ ಹೆಸರು ಟಿ ಪಿ ಕೈಲಾಸಂ. ಕನ್ನಡಕೊಬ್ಬನೆ ಕೈಲಾಸಂ ಕನ್ನಡಿಗರ ಹೆಮ್ಮೆಯೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಟಿಪಿ ಕೈಲಾಸಂ ಕೊಡುಗೆಗಳ ಕುರಿತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಕೈಲಾಸಂ ರವರ ನಾಟಕ ಮತ್ತು ಕವನಗಳ ರಚನೆ ವಿಶೇಷವಾದ ಕನ್ನಡ ಸಾಹಿತ್ಯದ ಅಮೂಲ್ಯ ಸಂಪತ್ತು. ಅವರ ನಾಟಕಗಳಲ್ಲಿ ವಿಡಂಬನೆ ,ಹಾಸ್ಯ ಹಾಗೂ ಮೌಲ್ಯಗಳ ಸಮಗ್ರ ಚಿಂತನೆ ಅಡಗಿದೆ. ಅವರ ಕವನಗಳು ಹಾಗೂ ನಾಟಕಗಳ ರಚನೆ ಕನ್ನಡ ಭಾಷಾ ಪ್ರಯೋಗದ ಹೊಸತನವಾಗಿದೆ. ಕೇಳಲು ಆಕರ್ಷಕವಾಗಿರುವ ಭಾಷೆ, ಹೆಸರುಗಳು ಅದರ ವಿಶೇಷವಾದ ಅರ್ಥಗಳು ,ಕನ್ನಡಿಗರ ಅಮೂಲ್ಯ ಆಸ್ತಿ. ಜಾರ್ಜ್ ಬರ್ನಾಡ್ ಷಾ ನಾಟಕಗಳಿಂದ ಪ್ರಭಾವಿತರಾಗಿ ಅದೇ ರೀತಿಯ ನಾಟಕ ರಚನೆಯನ್ನು ರಚಿಸಿದವರು . ಕಾನ್ಸ್ಟಂಟಿ ನೋಪಲ್ ಕವನವನ್ನು ಇಂಗ್ಲೀಷ್ ಸಂಗೀತಗಾರ ಹೊಸ ರಾಗದಲ್ಲಿ ಹಾಡಿದ್ದನ್ನು ಸವಾಲಾಗಿ ಸ್ವೀಕರಿಸಿ ಅದೇ ರಾಗದಲ್ಲಿ ಕೋಳಿಕೆ ರಂಗ ಹಾಡು ರಚಿಸಿ ಇಡೀ ಜಗತ್ತಿಗೆ ಕನ್ನಡ ಸಾಹಿತ್ಯದ ಹೊಸತನವನ್ನು ನೀಡಿ ನಿಬ್ಬೆರಗಾಗುವಂತೆ ಮಾಡಿದ ಕೈಲಾಸಂ ರವರ ಪ್ರತಿ ಸಾಹಿತ್ಯ ನಿರ್ಮಲವಾದ, ಹೃದಯಪೂರ್ವಕವಾದ ಅವರ ಹಾಸ್ಯ ಮನಸ್ಸಿಗೆ ಮುದ ನೀಡುತ್ತದೆ ಎಂದು ತಿಳಿಸಿದರು .

ಕೈಲಾಸಂರವರ ನಾಟಕಗಳಾದ ಟೊಳ್ಳುಗಟ್ಟಿ, ಬಹಿಷ್ಕಾರ ,ನಮ್ ಬ್ರಾಹ್ಮಣಿಕೆ, ಅಮ್ಮಾವ್ರ ಗಂಡ ,ಪೋಲಿ ಕಿಟ್ಟಿ, ವೈದ್ಯನ ವ್ಯಾದಿ ,ಹಾಗೆಯೇ ಕವನ ಸಂಕಲನಗಳಾದ ತಿಪ್ಪಾರಳ್ಳಿ, ಕೋಳಿಕೆ ರಂಗ, ನಂಜಿ ನನ್ನ ಅಪರಂಜಿ, ಕಾಶಿಗೆ ಹೋದ ನಮ್ ಭಾವ, ಬೋರನ ಬಾರ ಕನ್ನಡಿಗರ ಮನೆ ಮಾತಾಗಿದೆ ಎಂದರು.

ಬರಹಗಾರ ಎಸ್ ಲಕ್ಷ್ಮಿ ನರಸಿಂಹ ಕೈಲಾಸಂ ಬಗ್ಗೆ ಮಾತನಾಡಿ ಹಾಸ್ಯ ವಿಡಂಬನೆಯ ಮೂಲಕ ಸದಾ ಕಾಲ ನೆನೆಸಿಕೊಳ್ಳುವ ಕರ್ನಾಟಕ ಪ್ರಹಸನ ಪಿತಾಮಹರಾಗಿ ರಂಗಭೂಮಿಗೆ ಅಪಾರ ಕೊಡುಗೆಯನ್ನು ನೀಡಿದವರು. ಉನ್ನತ ಶಿಕ್ಷಣ ಪಡೆದ ಕೈಲಾಸಂ ರವರು ಉತ್ತಮ ಜ್ಞಾನಿಗಳು .ಕ್ರೀಡಾಪಟುಗಳು ಆಗಿದ್ದವರು. ಕನ್ನಡ ಸಾಹಿತ್ಯ ಲೋಕಕ್ಕೆ ಕೈಲಾಸಂ ರವರ ಸಾಹಿತ್ಯದ ನುಡಿಗಳು ಕನ್ನಡದ ನೋಡಿ ಮುತ್ತುಗಳಾಗಿ ಇದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಬಿಕೆ ಆರಾಧ್ಯ, ಶಿವಲಿಂಗ ಮೂರ್ತಿ, ಮಹೇಶ್ ಗೌಡ ,ಪರಶಿವಪ್ಪ, ಮಂಜುನಾಥ್, ಮಾದೇವ ಶೆಟ್ಟಿ, ಲೋಕೇಶ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular