ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಗ್ರಾಮೀಣ ಪ್ರದೇಶದ ರೈತರ ಅಭಿವೃದ್ಧಿಗೆ ಪೂರಕವಾಗುವಂತೆ ಪಿ ಎಲ್ ಡಿ ಬ್ಯಾಂಕಿನ ನಿರ್ದೇಶಕರನ್ನು ಆಯ್ಕೆ ಮಾಡಬೇಕಿದ್ದು ಸಾಲಗಾರರಲ್ಲದ ಕ್ಷೇತ್ರದ ಪುಷ್ಪಲತಾ ಸಿ. ಪಿ ರಮೇಶ್ ಅವರನ್ನು ಗೆಲ್ಲಿಸಿಕೊಡಬೇಕು ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ ರಮೇಶ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಹೋಬಳಿಯ ಹೊಸೂರು ಗ್ರಾಮದಲ್ಲಿ ತಮ್ಮ ಪತ್ನಿ ಪರವಾಗಿ ಮತ ಯಾಚನೆ ಮಾಡಿ ಮಾತನಾಡಿದ ಅವರು ಪಕ್ಷಬೇಧ ಮರೆತು ನಮ್ಮ ಅಭ್ಯರ್ಥಿಗೆ ಬೆಂಬಲ ವ್ಯಕ್ತವಾಗುತ್ತಿದ್ದು ಕಾಂಗ್ರೆಸ್ ಪಕ್ಷದ ಬೆಂಬಲ ನಮ್ಮ ಜೊತೆಗಿದ್ದು ಗೆಲುವು ನಮ್ಮದಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಹಾಡ್ಯ ಮಾದೇವಸ್ವಾಮಿ, ಪಿಎಲ್‌ಡಿ ಬ್ಯಾಂಕಿನಮಾಜಿ ನಿರ್ದೇಶಕರಾದ ಪ್ರಸಾದ್, ಗ್ರಾಪಂ ಮಾಜಿ ಸದಸ್ಯ ಡೈರಿ ಮಾಧು, ಡೈರಿ ಮಾಜಿ ಅಧ್ಯಕ್ಷ ಎಚ್ ಜೆ ರಮೇಶ್, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ ಶಂಕರ್, ಪ್ರಸನ್ನ ಸೇರಿದಂತೆ ಇನ್ನಿತರರು ಹಾಜರಿದ್ದರು.