ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಪಿಎಲ್‌ಡಿ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಜ.೧೯ರಂದು ಚುನಾವಣೆ
ನಡೆಯಲಿದ್ದು ಕಾಂಗ್ರೆಸ್ ಪಕ್ಷದ ಬೆಂಬಲಿತ ೧೪ ಮಂದಿ ಅಭ್ಯರ್ಥಿಗಳು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ
ದೊಡ್ಡಸ್ವಾಮೇಗೌಡ ಜತೆಗೂಡಿ ಶುಕ್ರವಾರ ನಾಮಪತ್ರ ಸಲ್ಲಿಸಿದರು.
ಸಾಲಗಾರರಲ್ಲದ ಕ್ಷೇತ್ರದಿಂದ ಪುಷ್ಪಲತಾ ಸಿ.ಪಿ.ರಮೇಶ್, ಸಾಲಗಾರರ ಸಾಮಾನ್ಯ ಚರ‍್ನಹಳ್ಳಿ ಕ್ಷೇತ್ರದಿಂದ
ಕುಳ್ಳಬೋರೇಗೌಡ, ಹೆಬ್ಬಾಳು ಸಾಮಾನ್ಯ ಕ್ಷೇತ್ರದಿಂದ ಕೆ.ಟಿ.ಚಂದ್ರೇಗೌಡ, ಮಳಲಿ ಕ್ಷೇತ್ರದಿಂದ ಕೆ.ಮಹದೇವ್,
ಮಂಚನಹಳ್ಳಿ ಹಿಂದುಳಿದ ಎ ಮೀಸಲಿಂದ ಮಲ್ಲಿಕಾರ್ಜುನ್, ದೊಡ್ಡಕೊಪ್ಪಲು ಸಾಮಾನ್ಯದಿಂದ ರಾಹುಲ್, ಅಂಕನಹಳ್ಳಿ ಮಹಿಳಾ ಮೀಸಲು ಕ್ಷೇತ್ರದಿಂದ ಕಲಾವತಿ, ಹಾಡ್ಯ ಮಹಿಳಾ ಮೀಸಲು ಕ್ಷೇತ್ರದಿಂದ ಮಂಗಳಪ್ರಸಾದ್, ತಂದ್ರೆ ಸಾಮಾನ್ಯ ಕ್ಷೇತ್ರದಿಂದ ಚಂದ್ರಹಾಸ, ಮಿರ್ಲೆ ಸಾಮಾನ್ಯ ಮಲ್ಲಿಕಾರ್ಜುನ್, ಸಾಲಿಗ್ರಾಮ ಸಾಮಾನ್ಯದಿಂದ ಆರ್.ಸಿ.ರಮೇಶ್, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ಭೇರ್ಯದಿಂದ ಶಿವನಂಜಯ್ಯ, ಪರಿಶಿಷ್ಟ ಪಂಗಡ ತಿಪ್ಪೂರು ಕ್ಷೇತ್ರದಿಂದ ಗಂಗಾಧರ್, ಕೆ.ಆರ್.ನಗರ ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಹೆಚ್.ಕೆ.ಪ್ರದೀಪ್‌ಕುಮಾರ್ ಅವರುಗಳು ನಾಮಪತ್ರ ಸಲ್ಲಿಸಿದ್ದಾರೆ.
ಇವರ ಜೊತೆಗೆ ಬಂಡಾಯ ಅಭ್ಯರ್ಥಿಗಳಾಗಿ ಮಂಚನಹಳ್ಳಿ ಕ್ಷೇತ್ರದಿಂದ ಇಂದ್ರೇಶ್ ಸೇರಿದಂತೆ ಹಲವು ಮಂದಿ ವಿವಿಧ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಿದ್ದು ಇವರುಗಳನ್ನು ವಾಪಾಸ್ಸ್ ತೆಗೆಸುವ ಜವಾಬ್ದಾರಿ ಕಾಂಗ್ರೆಸ್
ಪಕ್ಷದ ವರಿಷ್ಠರ ಮೇಲಿದೆ. ನಾಮಪತ್ರ ಸಲ್ಲಿಸಿದ ೧೪ ಮಂದಿ ಅಭ್ಯರ್ಥಿಗಳಿಗೆ ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ
ದೊಡ್ಡಸ್ವಾಮೇಗೌಡ ಶುಭಕೋರಿ ಜಯಗಳಿಸುವಂತೆ ಹಾರೈಸಿದರು.
ಆನಂತರ ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ೫ ವರ್ಷ ಅಧಿಕಾರದಲ್ಲಿ ಪಿಎಲ್‌ಡಿ ಬ್ಯಾಂಕ್ ಆಡಳಿತ ಮಂಡಳಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ
ಹಿಡಿಯಲಿದೆ ಎಂದ ಅವರು ಈವರೆಗೆ ಇದ್ದ ಆಡಳಿತ ಮಂಡಳಿ ರೈತರ ಪರವಾಗಿ ಕೆಲಸ ಮಾಡುವುದರ ಜತೆಗೆ ಬ್ಯಾಂಕ್‌ನ ಏಳಿಗೆಗೆ ದುಡಿದು ಲಾಭದತ್ತ ಕೊಂಡೋಯ್ಯಲು ಯಶಸ್ವಿಯಾಗಿದ್ದಾರೆ ಎಂದರು.
ಬ್ಯಾಂಕ್‌ನ ಆಡಳಿತ ಕಛೇರಿ ಶೀಥಲಗೊಂಡಿದನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಿದ್ದಾರೆ ಇದರ ಜತೆಗೆ ಬ್ಯಾಂಕ್‌ನ ರೈತ ಸಮುದಾಯ ಭವನವನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ ಆದ್ದರಿಂದ ರೈತ ಬಾಂದವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡಬೇಕೆಂದು ಮನವಿ ಮಾಡಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ಪುರಸಭೆ ಸದಸ್ಯರಾದ ಶಿವುನಾಯಕ್, ನಟರಾಜು, ಶಂಕರ್, ಮಾಜಿ ಸದಸ್ಯ ಕೆ.ವಿನಯ್, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್‌ಕುಮಾರ್,
ಕುರುಬರ ಸಂಘದ ಅಧ್ಯಕ್ಷ ಚೀರನಹಳ್ಳಿ ಶಿವಣ್ಣ, ನಿರ್ದೇಶಕ ರಾಮಕೃಷ್ಣೇಗೌಡ, ತಾ.ಪಂ. ಮಾಜಿ ಅಧ್ಯಕ್ಷರಾದ ಹಾಡ್ಯಮಹದೇವಸ್ವಾಮಿ, ಮಲ್ಲಿಕಾರವಿಕುಮಾರ್, ಮಾಜಿ ಸದಸ್ಯ ಎಲ್.ಎಂ.ಸಣ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯದ್‌ಜಾಬೀರ್, ಅಡಗೂರು ಗ್ರಾ.ಪಂ. ಅಧ್ಯಕ್ಷ ಮಹದೇವ್, ಮಾಜಿ ಉಪಾಧ್ಯಕ್ಷ ದೊಡ್ಡಕೊಪ್ಪಲುರವಿ, ಮುಖಂಡರಾದ ಪುಟ್ಟರಾಜು, ಸಂಜಯ್‌ತಿಲಕ್, ಉಮಾಶಂಕರ್, ಮಹದೇವ್, ಸುಬ್ಬೇಗೌಡ, ಹೆಚ್.ಕೆ.ನಾಗರಾಜು, ಗಂಧನಹಳ್ಳಿಕಿಟ್ಟಿ, ಪುಟ್ಟೇಗೌಡ, ಉದಯಕುಮಾರ್, ಸಂಪತ್‌ಕುಮಾರ್ ಮತ್ತಿತರರು ಹಾಜರಿದ್ದರು.