Wednesday, September 10, 2025
Google search engine

Homeರಾಜ್ಯಸುದ್ದಿಜಾಲಜಾತಿ ಸಮೀಕ್ಷೆಯಲ್ಲಿ ಒಕ್ಕಲಿಗ ಎಂದು ನಿಖರವಾಗಿ ನಮೂದಿಸಿ: ಒಕ್ಕಲಿಗರ ಸಂಘ ಮನವಿ

ಜಾತಿ ಸಮೀಕ್ಷೆಯಲ್ಲಿ ಒಕ್ಕಲಿಗ ಎಂದು ನಿಖರವಾಗಿ ನಮೂದಿಸಿ: ಒಕ್ಕಲಿಗರ ಸಂಘ ಮನವಿ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್‌.ನಗರ : ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಾಮಾ ಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲಿದ್ದು, ಗಣತಿದಾರರು ಮನೆ ಮನೆಗೆ ಬಂದಾಗ ಒಕ್ಕಲಿಗ ಜನಾಂ ಗದವರು ತಪ್ಪದೇ ‘ಒಕ್ಕಲಿಗ’ ಎಂದೇ ಜಾತಿ ಯನ್ನು ಬರೆಸಬೇಕು ಎಂದು ಕೆ.ಆರ್‌.ನಗರ ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮ್ ಉಪಾಧ್ಯಕ್ಷ ಹೊಸೂರು.ಎ. ಕುಚೇಲ್ ಮನವಿ ಮಾಡಿದ್ದಾರೆ.

ಸಮುದಾಯದವರು ಯಾವುದೇ ಕಾರಣಕ್ಕೂ ಸಮೀಕ್ಷೆಯಿಂದ ‘ಒಕ್ಕಲಿಗ ಜನಾಂಗದ ಯಾರೊಬ್ಬರೂ ಹೊರಗುಳಿಯಬಾರದು ಎಂದು ಅವರು ಮನವಿ ಮಾಡಿರುವ ಅವರು ಇದರಿಂದ ರಾಜ್ಯದಲ್ಲಿ ನಮ್ಮ ಸಮುದಾಯ ಸಂಖ್ಯೆ ಎಷ್ಟು ಇದೆ ಎಂಬುದನ್ನು ತಿಳಿಯಲು ಸಹಕಾರಿಯಾಗಲಿದೆ ಎಂದರು
ಗಣತಿ ಜಾತಿ ಕಾಲಂ 6ರಲ್ಲಿ ಒಕ್ಕಲಿಗ ಎಂದು ಕಾಲಂ 7ರಲ್ಲಿ ಉಪಜಾತಿಯನ್ನು ತಿಳಿಸಬೇಕು. ಜಾತಿ ಗಣತಿಯಲ್ಲಿ ನಮ್ಮ ಸಮುದಾಯದವರು ತಮ್ಮ ತಮ್ಮ ಮನೆಯವರ ವಿವರವನ್ನು ನಿಖರವಾಗಿ ಪೂರ್ಣವಾಗಿ ನೀಡಬೇಕು ಎಂದು ಕೋರಿದ್ದಾರೆ.

ಗಣತಿದಾರರಿಗೆ ಕುಟುಂಬದವರ ಸಂಖ್ಯೆ ಅವರು ಪಡೆದಿರುವ ಶಿಕ್ಷಣ, ಉದ್ಯೋಗ, ಆಸ್ತಿ, ಆರ್ಥಿಕ ಪರಿಸ್ಥಿತಿ ಮೊದ ಮಾಹಿತಿಗಳನ್ನು ಸಮರ್ಪಕವಾಗಿ ನೀಡಿ ಎಂದ ಅವರು ಸಮುದಾಯದ ಮುಖಂಡರು ಸಮಾಜದವರಿಗೆ ಗಣತಿಯ ಅನುಕೂಲದ ಬಗ್ಗೆ‌ ಅರಿವು ಮೂಡಿಸುವಂತೆ ಮನವಿ ಮಾಡಿದ ಶಿವರಾಂ ಮತ್ತು ಕುಚೇಲ್ ಈ ಬಗ್ಗೆ ಆದಿಚುಂಚನಗಿರಿ ಮೈಸೂರು ಶಾಖ ಮಠದ ಸೋಮೇಶ್ವರನಾಥ ಸ್ವಾಮಿ ಅವರ ನೇತೃದಲ್ಲಿ ಜಾಗೃತಿ ಸಭೆ ನಡೆಸಿಲಾಗಿದೆ ಎಂದು ಮಾಹಿತಿ ನೀಡಿದರು

RELATED ARTICLES
- Advertisment -
Google search engine

Most Popular