Monday, April 21, 2025
Google search engine

Homeರಾಜ್ಯಪ್ರಧಾನಿ ಮೋದಿ, ಅಮಿತ್ ಶಾಗೆ ಕರ್ನಾಟಕದ ಜನತೆ ಬಳಿ ಮತಕೇಳುವ ನೈತಿಕತೆ ಇಲ್ಲ : ಸುರ್ಜೇವಾಲಾ...

ಪ್ರಧಾನಿ ಮೋದಿ, ಅಮಿತ್ ಶಾಗೆ ಕರ್ನಾಟಕದ ಜನತೆ ಬಳಿ ಮತಕೇಳುವ ನೈತಿಕತೆ ಇಲ್ಲ : ಸುರ್ಜೇವಾಲಾ ವಾಗ್ದಾಳಿ

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ೬.೫ ಕೋಟಿ ಕನ್ನಡಿಗರ ವಿರೋಧಿಗಳು, ಕರ್ನಾಟಕದ ಜನತೆ ಬಳಿ ಮತ ಕೇಳುವ ನೈತಿಕತೆ ಅವರಿಗೆ ಇಲ್ಲವೆಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ವಾಗ್ದಾಳಿ ನಡೆಸಿದರು.

ಇಂದು ಶನಿವಾರ ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಅವರಿಬ್ಬರಿಗೂ ಕರ್ನಾಟಕ ಜನತೆಯ ಮತ ಕೇಳುವ ನೈತಿಕತೆ ಇಲ್ಲ, ಕರ್ನಾಟದ ಜನತೆ ವಿಶೇಷವಾಗಿ ಕನ್ನಡದ ಅನ್ನದಾತರಿಗೆ ಮೋದಿ ಅಮಿತ್ ಶಾ ಕೊಟ್ಟಿದ್ದು ಚೊಂಬು, ನಾಳೆ ದಾವಣಗೆರೆಗೆ ಪ್ರಧಾನಿ ಆಮಿಸಲಿದ್ದಾರೆ. ಗೋ ಬ್ಯಾಕ್ ಮೋದಿ ಹೋರಾಟವನ್ನು ಕಾಂಗ್ರೆಸ್ ಮಾಡಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬರ ಘೋಷಣೆ ಆಗಿದೆ. ಕುಡಿಯವ ನೀರು ಜಾನುವಾರುಗಳಿಗೆ ಮೇವು ಬೇಕಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಪರಿಹಾರ ಕೇಳಿದ್ರೆ ಚೊಂಬು ಕೊಟ್ಟಿದ್ದಾರೆ. ರಾಜ್ಯದ ಸಿಎಂ ಸೇರಿದಂತೆ ಸಚಿವರು ಪರಿಹಾರ ನೀಡುವಂತೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದರು. ಆದ್ರೆ ಮೋದಿ ಮತ್ತು ಶಾ ಕರ್ನಾಟಕದ ವಿರುದ್ಧ ಸೇಡು ತೆಗೆದುಕೊಳ್ಳುತ್ತಿದ್ದಾರೆ. ಕಾರಣ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕನ್ನಡಿಗರು ಕಾಂಗ್ರೆಸ್ ಗೆ ಆರ್ಶೀವಾದ ಮಾಡಿದ್ರು. ಇದನ್ನ ಸಹಿಸಿಕೊಳ್ಳುವ ಶಕ್ತಿ ಮೋದಿ ಹಾಗೂ ಅಮಿತ್ ಶಾ ಗೆ ಇಲ್ಲಾ. ಇದೇ ಕಾರಣಕ್ಕೆ ಕನ್ನಡಿಗರ ವಿರುದ್ಧ ರಿವೇಂಜ್ ತೆಗೆದುಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಕನ್ನಡಿಗರು ಅವರಿಗೆ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.

RELATED ARTICLES
- Advertisment -
Google search engine

Most Popular