ತಮಿಳುನಾಡು: ಆ ಪ್ರದೇಶಕ್ಕೆ ರೈಲು ಸಂಪರ್ಕ ಕಲ್ಪಿಸದೇ ಇದ್ದರೇ ಭಾರತದೊಂದಿಗೆ ಸಂಪರ್ಕವೇ ಇರುತ್ತಿರಲಿಲ್ಲ. ರೈಲು ಮಾರ್ಗದೊಂದಿಗೆ ಸಂಪರ್ಕ ಪಡೆದಂತ ಭಾರತದ ಭೂ ಭಾಗವೇ ರಾಮೇಶ್ವರಂ.
ಈ ನಗರಕ್ಕೆ ಸಂಪರ್ಕ ಕಲ್ಪಿಸಿದ್ದೇ ಪಂಬನ್ ಸೇತುವೆ. ಕೆಲ ವರ್ಷಗಳಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರಕ್ಕೆ ನೂತನ ಸಮುದ್ರ ರೈಲು ಸೇತುವೆ ಸಿದ್ಧಗೊಂಡಿದೆ. ಇಂತಹ ದೇಶದ ಮೊದಲ ಲಿಫ್ಟ್ ಸೇತುವೆ ರಾಮೇಶ್ವರಂನ ಪಂಬನ್ ಪ್ರಿಡ್ಜ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಲೋಕಾರ್ಪಣೆಗೊಳಿಸಿದ್ದಾರೆ.
ರಾಮೇಶ್ವರಂ, ತಮಿಳುನಾಡು: ಭಾರತದ ಮೊದಲ ಲಂಬ ಲಿಫ್ಟ್ ಸಮುದ್ರ ಸೇತುವೆಯಾದ ಹೊಸ ಪಂಬನ್ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು ಮತ್ತು ರಾಮೇಶ್ವರಂ-ತಾಂಬರಂ (ಚೆನ್ನೈ) ಹೊಸ ರೈಲು ಸೇವೆಗೆ ಹಸಿರು ನಿಶಾನೆ ತೋರಿದರು.