ಲಕ್ನೋ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ತಮ್ಮ ಸ್ವಕ್ಷೇತ್ರ ವಾರಣಾಸಿಗೆ ಭೇಟಿ ನೀಡಿದ್ದು, ₹2,200 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದರು. ಈ ಯೋಜನೆಗಳು ಮೂಲಸೌಕರ್ಯ, ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೆ ಸಂಬಂಧಿಸಿದ್ದು, ನಗರಾಭಿವೃದ್ಧಿಗೆ ನೂತನ ಚೇತನವನ್ನು ನೀಡಲಿದೆ.
ಇದೇ ಸಂದರ್ಭದಲ್ಲಿ ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿಯ 20ನೇ ಕಂತಿನ ₹20,000 ಕೋಟಿಗೂ ಹೆಚ್ಚು ಮೊತ್ತವನ್ನು 9.7 ಕೋಟಿ ರೈತರ ಖಾತೆಗೆ ನೇರವಾಗಿ ಜಮೆ ಮಾಡಿದರು.
ಸಭೆಯ ವೇದಿಕೆಯಲ್ಲಿ ಮಾತನಾಡಿದ ಮೋದಿ, ʻಆಪರೇಷನ್ ಸಿಂಧೂರʼ ಯಶಸ್ಸು ಕುರಿತಾಗಿ ವಿವರ ನೀಡುತ್ತಾ, “ಇದು ನಮ್ಮ ಹೆಣ್ಣುಮಕ್ಕಳ ಸಿಂಧೂರಕ್ಕೆ ತೀರಿದ ಸೇಡು. ಈ ಯಶಸ್ಸನ್ನು ಮಹಾದೇವನ ಆಶೀರ್ವಾದದಿಂದ ಸಾಧ್ಯವಾಗಿದ್ದು, ಅವರ ಪಾದಗಳಿಗೆ ಅರ್ಪಿಸುತ್ತೇನೆ” ಎಂದು ಹೇಳಿದರು.
ವಿಕಾಸ ಹಾಗೂ ರಾಷ್ಟ್ರ ಭದ್ರತೆಗೆ ಈ ಭೇಟಿಯು ಪ್ರಮುಖ ಮುನ್ನಡೆ ನೀಡಿದೆ.