Friday, April 4, 2025
Google search engine

HomeUncategorizedರಾಷ್ಟ್ರೀಯಭಾರತೀಯ ಸೇನೆಯ ದೃಢತೆ, ವೃತ್ತಿಪರತೆ ಮತ್ತು ಸಮರ್ಪಣಾ ಭಾವನೆಗೆ ಪ್ರಧಾನಿ ಮೋದಿ ಶ್ಲಾಘನೆ

ಭಾರತೀಯ ಸೇನೆಯ ದೃಢತೆ, ವೃತ್ತಿಪರತೆ ಮತ್ತು ಸಮರ್ಪಣಾ ಭಾವನೆಗೆ ಪ್ರಧಾನಿ ಮೋದಿ ಶ್ಲಾಘನೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ಸೇನೆಯ ದೃಢತೆ ವೃತ್ತಿಪರತೆ ಮತ್ತು ಸಮರ್ಪಣೆ ಮನೋಭಾವವನ್ನು ಶ್ಲಾಘಿಸಿದ್ದಾರೆ ಮತ್ತು ಸಶಸ್ತ್ರ ಪಡೆಗಳು ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕೆ ತಮ್ಮ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದರು.

77ನೇ ‘ಭಾರತೀಯ ಸೇನಾ ದಿನ’ದ ಪ್ರಯುಕ್ತ ‘ಎಕ್ಸ್’ನಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿರುವ ಅವರು, ‘ಇಂದು ಸೇನಾ ದಿನ. ನಮ್ಮ ದೇಶದ ಭದ್ರತೆಯ ಕಾವಲುಗಾರನಾಗಿ ನಿಂತಿರುವ ಭಾರತೀಯ ಸೇನೆಯ ಅಚಲ ಧೈರ್ಯವನ್ನು ನಾವು ಸ್ಮರಿಸೋಣ. ನಾವು ಧೈರ್ಯಶಾಲಿಗಳು ಮಾಡಿದ ತ್ಯಾಗವನ್ನು ಸ್ಮರಿಸುತ್ತೇವೆ. ಪ್ರತಿದಿನ ಕೋಟಿಗಟ್ಟಲೆ ಭಾರತೀಯರ ಸುರಕ್ಷತೆಗೆ ಸೇನೆ ಬದ್ಧವಾಗಿದೆ ಎಂದಿದ್ದಾರೆ.

‘ಭಾರತೀಯ ಸೇನೆಯು ಸಂಕಲ್ಪ, ವೃತ್ತಿಪರತೆ ಮತ್ತು ಸಮರ್ಪಣಾ ಮನೋಭಾವವನ್ನು ಸಾರುತ್ತದೆ ಎಂದು ಅವರು ಹೇಳಿದರು. ನಮ್ಮ ಗಡಿಗಳನ್ನು ರಕ್ಷಿಸುವುದರ ಜೊತೆಗೆ, ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಮಾನವೀಯ ಸಹಾಯವನ್ನು ಒದಗಿಸುವಲ್ಲಿ ಇದು ಛಾಪು ಮೂಡಿಸಿದೆ ಎಂದು ಅವರು ಹೇಳಿದರು.

ನಮ್ಮ ಸರ್ಕಾರವು ಸಶಸ್ತ್ರ ಪಡೆಗಳು ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕೆ ಬದ್ಧವಾಗಿದೆ. ವರ್ಷಗಳಲ್ಲಿ, ನಾವು ಹಲವಾರು ಸುಧಾರಣೆಗಳನ್ನು ಪರಿಚಯಿಸಿದ್ದೇವೆ ಮತ್ತು ಆಧುನೀಕರಣದತ್ತ ಗಮನಹರಿಸಿದ್ದೇವೆ. ಇದು ಮುಂದಿನ ದಿನಗಳಲ್ಲಿಯೂ ಮುಂದುವರಿಯುತ್ತದೆ ಎಂದು ಅವರು ಹೇಳಿದರು.

1949 ರಲ್ಲಿ ಜನರಲ್‌ ಜನರಲ್ ಸರ್ ಫ್ರಾನ್ಸಿಸ್ ಬುಚರ್ ಅವರಿಂದ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಜನರಲ್‌ ಕೆ ಎಂ ಕಾರಿಯಪ್ಪ ಅವರ ಸರಣಾರ್ಥವಾಗಿ ಪ್ರತಿವರ್ಷ ಸೇನಾ ದಿನವನ್ನು ಆಚರಿಸಲಾಗುತ್ತದೆ.

RELATED ARTICLES
- Advertisment -
Google search engine

Most Popular