ವಾರಾಣಸಿ: ಮೂರನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಕಾಶಿಗೆ ಆಗಮಿಸುತ್ತಿದ್ದು ಸಂಜೆ ರೋಡ್ ಶೋ ನಡೆಸಲಿದ್ದಾರೆ. ವಾರಾಣಸಿಯಲ್ಲಿ ಮೇ ೧೪ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಅದಕ್ಕೂ ಮುನ್ನ ಮೋದಿ ರೋಡ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ. ಮೋದಿಯವರನ್ನು ಬರಮಾಡಿಕೊಳ್ಳಲು ವಾರಾಣಸಿ ಸಜ್ಜಾಗಿದೆ.
ಇಂದು ಬಿಎಚ್‌ಯು ಸಿಂಗ್‌ದ್ವಾರದಿಂದ ವಿಶ್ವನಾಥ್ ಧಾಮದವರೆಗೆ ರೋಡ್ ಶೋ ನಡೆಸಲಿದೆ. ೨೦೧೪,೨೦೧೯ರ ನಂತರ ಪ್ರಧಾನಿ ಮತ್ತೊಮ್ಮೆ ೨೦೨೪ರಲ್ಲಿ ವಾರಾಣಸಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ. ತಮ್ಮ ಎರಡು ದಿನಗಳ ಕಾರ್ಯಕ್ರಮದಲ್ಲಿ ಅವರು ಬಿಹಾರ ಹಾಗೂ ಜಾರ್ಖಂಡ್‌ನಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಮೇ ೧೩ರಂದು ಸಂಜೆ ೪ ಗಂಟೆಗೆ ಬಬತ್?ಪುರ ವಿಮಾನ ನಿಲ್ದಾಣ ತಲುಪಲಿದ್ದಾರೆ.
ಇಲ್ಲಿಂದ ಸೇನಾ ಹೆಲಿಕಾಪ್ಟರ್ ಬಿಎಚ್‌ಯು ಹೆಲಿಪ್ಯಾಡ್ ತಲುಪಲಿದೆ. ಅಲ್ಲಿಂದ ತೆರೆದ ವಾಹನದಲ್ಲಿ ಮೋದಿ ಲಂಕಾದ ಸಿಂಗ್?ದ್ವಾರಕ್ಕೆ ಬರಲಿದ್ದಾರೆ. ಇಲ್ಲಿ ೫ ಗಂಟೆಗೆ ಮಾಳವೀಯರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮಹಾಮಾನ ಪಂಡಿತ ವಿಶ್ವನಾಥ್ ಧಾಮವನ್ನು ತಲುಪಲು ಸುಮಾರು ೪ ಗಂಟೆಗಳು ಬೇಕಾಗುತ್ತದೆ. ವಿಶ್ವನಾಥ ದೇಗುಲದಲ್ಲಿ ಷೋಡಶೋಪಚಾರ ದರ್ಶನ ಹಾಗೂ ಪೂಜೆ ಸಲ್ಲಿಸಿದ ಬಳಿಕ ರಸ್ತೆ ಮಾರ್ಗವಾಗಿ ಬರೇಕ ಅತಿಥಿಗೃಹಕ್ಕೆ ತೆರಳಲಿದ್ದಾರೆ.