ಬೆಂಗಳೂರು: ಮಧುರೈ-ಬೆಂಗಳೂರು ಸೇರಿದಂತೆ ಮೂರು ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ.
ವಿಡಿಯೊ ಕಾನ್ಫರೆನ್ಸ್ ಮೂಲಕ ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಪ್ರಧಾನಿ ಹಸಿರು ನಿಶಾನೆ ತೋರಿದ್ದಾರೆ.
ವಂದೇ ಭಾರತ್ ರೈಲುಗಳ ಪಟ್ಟಿ:
ಬೆಂಗಳೂರು-ಮಧುರೈ (ರೈಲು ನಂ. 20671/20672)
ಮೀರತ್-ಲಖನೌ (ರೈಲು ನಂ. 22490/22489)
ಚೆನ್ನೈ–ನಾಗರಕೋಯಿಲ್ (ರೈಲು ನಂ. 20627/20628)
ಈ ರೈಲುಗಳು ಬೆಂಗಳೂರು-ಮಧುರೈ, ಮೀರತ್-ಲಖನೌ ಮತ್ತು ಚೆನ್ನೈ–ನಾಗರಕೋಯಿಲ್ ನಡುವೆ ಸಂಚರಿಸಲಿವೆ. ಬೆಂಗಳೂರು-ಮಧುರೈ ವಂದೇ ಭಾರತ್ ರೈಲು ಸುಮಾರು 1 ಗಂಟೆ 30 ನಿಮಿಷಗಳ ಪ್ರಯಾಣದ ಸಮಯ ಉಳಿತಾಯ ಮಾಡುತ್ತದೆ ಎಂದು ವರದಿ ತಿಳಿಸಿದೆ.