ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಜೋರ್ಡಾನ್, ಇಥಿಯೋಪಿಯಾ ಮತ್ತು ಓಮನ್ ದೇಶಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ದೆಹಲಿಯಲ್ಲಿ ದಟ್ಟ ಮಂಜಿನಿಂದಾಗಿ ವಿಮಾನ ಸರಿಯಾದ ಸಮಯಕ್ಕೆ ಬಾರದ ಪರಿಣಾಮ ಪ್ರಧಾನಿ ಮೋದಿ ವಿದೇಶ ಪ್ರವಾಸ ವಿಳಂಬವಾಗಿದ್ದು, ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ದಟ್ಟವಾದ ಮಂಜಿನಿಂದಾಗಿ ವಿಳಂಬವಾಯಿತು ಎನ್ನಲಾಗಿದೆ.
ಪ್ರಧಾನಿ ಬೆಳಿಗ್ಗೆ 8.30 ಕ್ಕೆ ಹೊರಡಬೇಕಿತ್ತು. ನಾನು ಜೋರ್ಡಾನ್‌ಗೆ ಭೇಟಿ ನೀಡುತ್ತಿದ್ದೇನೆ, ರಾಜ ಅಬ್ದುಲ್ಲಾ II ಇಬ್ನ್ ಅಲ್ ಹುಸೇನ್ ಅವರ ಆಹ್ವಾನದ ಮೇರೆಗೆ ಅಲ್ಲಿಗೆ ಹೋಗುತ್ತಿದ್ದೇನೆ. ಈ ಐತಿಹಾಸಿಕ ಭೇಟಿಯು ನಮ್ಮ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಬೆಳಗಿನ ತಾಪಮಾನವು 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಈ ಹಿನ್ನಲೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಡಿಸೆಂಬರ್ 16-17 ರಂದು ಪ್ರಧಾನಿ ಮೋದಿ ಇಥಿಯೋಪಿಯಾಗೆ ಭೇಟಿ ನೀಡಲಿದ್ದಾರೆ ಮತ್ತು ಅಂತಿಮ ಹಂತದಲ್ಲಿ ಡಿಸೆಂಬರ್ 17-18 ರಂದು ಓಮನ್‌ಗೆ ಭೇಟಿ ನೀಡಲಿದ್ದಾರೆ. ಡಿಸೆಂಬರ್ 16 ರಂದು ಪ್ರಧಾನಿ ಮೋದಿ ಅವರು ಇಥಿಯೋಪಿಯಾಗೆ ತೆರಳಲಿದ್ದಾರೆ.
ಇದು ಪೂರ್ವ ಆಫ್ರಿಕಾದ ರಾಷ್ಟ್ರಕ್ಕೆ ಪ್ರಧಾನಿ ಮೋದಿ ಅವರ ಮೊದಲ ಭೇಟಿಯಾಗಿದ್ದು, ಈ ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಅಡಿಸ್ ಅಬಾಬಾದಲ್ಲಿ ಇಥಿಯೋಪಿಯನ್ ಪ್ರಧಾನಿ ಅಬಿ ಅಹ್ಮದ್ ಅಲಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಇಥಿಯೋಪಿಯಾ ನಂತರ, ಪ್ರಧಾನಿ ಮೋದಿ ಡಿಸೆಂಬರ್ 17 ರಂದು ಒಮನ್‌ಗೆ ಪ್ರಯಾಣಿಸಲಿದ್ದು, ಪ್ರಧಾನಿ ಮೋದಿ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅವರನ್ನು ಭೇಟಿ ಮಾಡಲಿದ್ದಾರೆ. ಭಾರತ ಮತ್ತು ಒಮಾನ್ ದ್ವಿಪಕ್ಷೀಯ ಸಂಬಂಧಗಳ 70 ವರ್ಷಗಳನ್ನು ಆಚರಿಸಿದ್ದು, ಇದರ ಸ್ಮರಣಾರ್ಥವಾಗಿ ಪ್ರಧಾನಿ ಮೋದಿ ಓಮನ್‌ಗೆ ಭೇಟಿ ನೀಡಲು ನಿರ್ಧರಿಸಿದ್ದಾರೆ. 2023 ರ ನಂತರ ಇದು ಪ್ರಧಾನಿ ಮೋದಿ ಅವರ ಎರಡನೇ ಓಮನ್ ಭೇಟಿಯಾಗಿದೆ ಎಂದು ತಿಳಿದು ಬಂದಿದೆ.



