Wednesday, July 8, 2026
Google search engine

HomeUncategorizedರಾಷ್ಟ್ರೀಯಪ್ರಧಾನಿ ಮೋದಿ ಭಾಷಣ : ‘ಕುಚ್ ಕುಚ್ ಹೋತಾ ಹೈ’ ಡೈಲಾಗ್ ಬಳಕೆಗೆ ಕರಣ್ ಸಂತಸ

ಪ್ರಧಾನಿ ಮೋದಿ ಭಾಷಣ : ‘ಕುಚ್ ಕುಚ್ ಹೋತಾ ಹೈ’ ಡೈಲಾಗ್ ಬಳಕೆಗೆ ಕರಣ್ ಸಂತಸ

ಇಂಡೋನೇಷ್ಯಾದ ಜಕಾರ್ತದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಾತನಾಡಿದ್ದಾರೆ. ಈ ಭಾಷಣದಲ್ಲಿ ಅವರು ಬಾಲಿವುಡ್‌ನ ಪ್ರಸಿದ್ಧ ‘ಕುಚ್ ಕುಚ್ ಹೋತಾ ಹೈ’ ಸಿನಿಮಾದ ಉಲ್ಲೇಖ ಮಾಡಿದ್ದಾರೆ. ಪ್ರಧಾನಿಯವರ ಈ ಮಾತಿಗೆ ಚಿತ್ರದ ನಿರ್ದೇಶಕ ಕರಣ್ ಜೋಹರ್ ಅಪಾರ ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಧಾನಿ ಮೋದಿ ಅವರು ತಮ್ಮ ಸಿನಿಮಾವನ್ನು ನೆನಪಿಸಿಕೊಂಡಿದ್ದಕ್ಕೆ ಕರಣ್ ಜೋಹರ್ ಅತ್ಯಂತ ಸಂತಸ ವ್ಯಕ್ತಪಡಿಸಿದ್ದಾರೆ. ಇಂಡೋನೇಷ್ಯಾದಲ್ಲಿ ಭಾರತೀಯ ಸಿನಿಮಾಗಳಿಗೆ ಭಾರಿ ಜನಪ್ರಿಯತೆ ಇದೆ. ಪ್ರಧಾನಿ ಮೋದಿ ಅವರು ಅಲ್ಲಿನ ಜನರಿಗೆ ಭಾರತದ ಸಿನಿಮಾಗಳ ಕ್ರೇಜ್ ನೆನಪಿಸಿದರು. ಶಾರುಖ್ ಖಾನ್ ಮತ್ತು ಕಾಜೋಲ್ ನಟನೆಯ ‘ಕುಚ್ ಕುಚ್ ಹೋತಾ ಹೈ’ ಚಿತ್ರದ ಶೀರ್ಷಿಕೆ ಗೀತೆಯನ್ನು ಅವರು ಪ್ರಸ್ತಾಪಿಸಿದರು. ಭಾರತ ಮತ್ತು ಇಂಡೋನೇಷ್ಯಾ ದೇಶಗಳ ಸ್ನೇಹದ ಬಗ್ಗೆ ಮೋದಿ ಮಾತನಾಡಿದರು. “ಇಲ್ಲಿ ಭಾರತದ ‘ಕುಚ್ ಕುಚ್ ಹೋತಾ ಹೈ’ ಹಾಡು ತುಂಬಾ ಫೇಮಸ್ ಆಗಿದೆ. ಇಂದು ನಾನು ಹೇಳಲು ಬಯಸುತ್ತೇನೆ. ಭಾರತ ಮತ್ತು ಇಂಡೋನೇಷ್ಯಾ ಜೊತೆಯಾಗಿ ಹೆಜ್ಜೆ ಇಟ್ಟರೆ ‘ಕುಚ್ ಕುಚ್’ (ಸ್ವಲ್ಪ ಸ್ವಲ್ಪ) ಮಾತ್ರ ಆಗುವುದಿಲ್ಲ. ಬದಲಿಗೆ ‘ಬಹುತ್ ಕುಚ್’ (ಬಹಳಷ್ಟು) ಒಳಿತಾಗುತ್ತದೆ’ ಎಂದು ಪ್ರಧಾನಿ ಮೋದಿ ವಿವರಿಸಿದರು ಎನ್ನಲಾಗುತ್ತಿದೆ.

ಪ್ರಧಾನಿ ಮೋದಿಯವರ ಭಾಷಣದ ವಿಡಿಯೋ ತುಣುಕನ್ನು ಕರಣ್ ಜೋಹರ್ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೇಟಸ್​​ನಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿಯವರು ಜಕಾರ್ತದಲ್ಲಿ ತಮ್ಮ ಸಿನಿಮಾದ ಬಗ್ಗೆ ಮಾತನಾಡಿದ್ದು ಹೆಮ್ಮೆ ತಂದಿದೆ ಎಂದು ಬರೆದುಕೊಂಡಿದ್ದಾರೆ. ಪ್ರೀತಿ ಎಂಬ ಭಾಷೆಗೆ ಯಾವುದೇ ಗಡಿಗಳಿಲ್ಲ ಎಂದು ಅವರು ಹೇಳಿದ್ದಾರೆ. ಈ ಹಾಡನ್ನು ಎಂದೆಂದಿಗೂ ಜೀವಂತವಾಗಿರಿಸಿದ್ದಕ್ಕೆ ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ.  ‘ಕುಚ್ ಕುಚ್ ಹೋತಾ ಹೈ’ ಸಿನಿಮಾ 1998 ರಲ್ಲಿ ಬಿಡುಗಡೆಯಾಗಿತ್ತು. ಇದು ಕರಣ್ ಜೋಹರ್ ನಿರ್ದೇಶನದ ಮೊದಲ ಸಿನಿಮಾವಾಗಿದೆ. ಶಾರುಖ್ ಖಾನ್, ಕಾಜೋಲ್ ಮತ್ತು ರಾಣಿ ಮುಖರ್ಜಿ ಈ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಬಾಲಿವುಡ್‌ನ ಸಾರ್ವಕಾಲಿಕ ದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಗಿದೆ ಎಂಬುದ್ದಾಗಿದೆ.

RELATED ARTICLES
- Advertisment -
Google search engine

Most Popular