Friday, April 18, 2025
Google search engine

Homeಅಪರಾಧಕಾನೂನುಪೋಕ್ಸೋ ಪ್ರಕರಣ: ಬಿ.ಎಸ್ ಯಡಿಯೂರಪ್ಪ ವಿಚಾರಣೆ ಡಿ.12ಕ್ಕೆ ಮುಂದೂಡಿದ ಹೈಕೋರ್ಟ್

ಪೋಕ್ಸೋ ಪ್ರಕರಣ: ಬಿ.ಎಸ್ ಯಡಿಯೂರಪ್ಪ ವಿಚಾರಣೆ ಡಿ.12ಕ್ಕೆ ಮುಂದೂಡಿದ ಹೈಕೋರ್ಟ್

ಬೆಂಗಳೂರು : ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ತಡೆಯಾಜ್ಞೆ ತೆರವು ಕೋರಿ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ನಡೆಯಿತು. ಈ ವೇಳೆ ವಾದ ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟಿನ ನ್ಯಾಯಮೂರ್ತಿಗಳು, ವಿಚಾರಣೆಯನ್ನು ಡಿಸೆಂಬರ್ 12ರಂದು ಮಧ್ಯಾಹ್ನ 3:30ಕ್ಕೆ ಮಂದೂಡಿ ಆದೇಶ ಹೊರಡಿಸಿದ್ದರು.

ಇಂದು ವಿಚಾರಣೆ ಆರಂಭವಾದ ವೇಳೆ, ಬಿ ಎಸ್ ಯಡಿಯೂರಪ್ಪ ಪರ ಹಿರಿಯ ವಕೀಲ ಸಿವಿ ನಾಗೇಶ್ ಅವರು, ಆರೋಪಿತ ಘಟನೆ ನಡೆದಿರುವುದು ಫೆಬ್ರವರಿ 2 ಬೆಳಗ್ಗೆ 11 ರಿಂದ 11:30 ವರೆಗೆ ಬಿಎಸ್ ಯಡಿಯೂರಪ್ಪ ಅವರ ಮನೆಯಲ್ಲಿ ಈ ಒಂದು ಘಟನೆ ನಡೆದಿರುವುದು ಆರೋಪವಿದೆ. 20 ಮತ್ತು 25 ಜನರ ಸಮ್ಮುಖದಲ್ಲಿ ಹೇಗೆ ನಡೆಯುವುದು ಸಾಧ್ಯವೇ? ಒಂದುವರೆ ತಿಂಗಳ ಬಳಿಕ ದೂರು ದಾಖಲಿಸಲಾಗಿದೆ.

ಈ ಮಧ್ಯೆ ಹಲವು ಬಾರಿ ದೂರುದಾರರು ಬಿಎಸ್ ಯಡಿಯೂರಪ್ಪ ಅವರ ಮನೆಗೆ ಬಂದಿದ್ದಾರೆ. ದೂರುದಾರ ಮಹಿಳೆ ನಟೋರಿಯಸ್ ಆಗಿದ್ದು, ಮಹಿಳೆ ಆಕೆಯ ಮೇಲೆ 56 ಕೇಸ್ ಇದೆ.ಭೂಮಿಯ ಮೇಲಿರುವ ಎಲ್ಲರ ಮೇಲು, ಆ ಮಹಿಳೆ ಕೇಸ್ ಹಾಕಿದ್ದರು. ಮಹಿಳೆ ತನ್ನ ಪತಿ ಹಾಗೂ ಪೊಲೀಸ್ ಆಯುಕ್ತರ ಮೇಲು ವಿರುದ್ಧ ಕೂಡ ದೂರು ಸಲ್ಲಿಸಿದ್ದರು. ದೂರುದಾರ ಮಹಿಳೆ ಪತಿ, ಮಗ ಮತ್ತು ಎಡಿಜಿಪಿ ಮೇಲು ದೂರು ಸಲ್ಲಿಸಿದರು.ಅವರ ಪಾರ್ಟಿ ಲೀಡರ್ ಉಗ್ರಪ್ಪ ಮೇಲು ಕೇಸ್ ಹಾಕಿದ್ದಾರೆ. ಎಂದು ವಾದ ಮಂಡಿಸಿದರು.

ಮೃತ ಮಹಿಳೆಯ ಮೇಲೆ ಅಪಮಾನಕಾರಿ ಹೇಳಿಕೆ ಸರಿಯಲ್ಲವೆಂದು ಆಕ್ಷೇಪ ವ್ಯಕ್ತವಾಯಿತು. ಎಸ್‌ಪಿಪಿ ರವಿವರ್ಮ ಕುಮಾರ್ ಮತ್ತು ಬಾಲನ್ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಾದ ಮತ್ತು ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್ ಏಕ ಸದಸ್ಯ ಪೀಠವು ವಿಚಾರಣೆಯನ್ನು ಡಿಸೆಂಬರ್ 12ಕ್ಕೆ ಮುಂದೂಡಿ ಆದೇಶ ಹೊರಡಿಸಿತು.

RELATED ARTICLES
- Advertisment -
Google search engine

Most Popular