Saturday, September 27, 2025
Google search engine

Homeಅಪರಾಧಕಾನೂನುಪೋಕ್ಸೋ ಪ್ರಕರಣ: 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ : ಅಪರಾಧಿಗೆ ಗಲ್ಲು ಶಿಕ್ಷೆ

ಪೋಕ್ಸೋ ಪ್ರಕರಣ: 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ : ಅಪರಾಧಿಗೆ ಗಲ್ಲು ಶಿಕ್ಷೆ

ಬೆಳಗಾವಿ: ಬಾಲಕಿ ಮೇಲೆ ಅತ್ಯಾ ಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿ ಕೋರ್ಟ್ ​​ ಮಹತ್ವದ ತೀರ್ಪು ಪ್ರಕಟಿಸಿದೆ.

ಅಪರಾಧಿ ರಾವಸಾಹೇಬ ಮಿರ್ಜಿ ಎಂಬುವವನಿಗೆ ಗಲ್ಲು ಶಿಕ್ಷೆಯನ್ನು ನೀಡಿರುವ ನ್ಯಾಯಾಲಯ, ಅಲ್ಲದೇ ಅಪರಾಧಿಗೆ 10 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.

2019 ಸೆಪ್ಟೆಂಬರ್​ 10ರಂದು ನಡೆದಿದ್ದ ಈ ಕೃತ್ಯಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಘನ ಸತ್ರ ನ್ಯಾಯಾಲಯವು ಈ ಶಿಕ್ಷೆಯನ್ನು ಪ್ರಕಟಿಸಿದೆ. ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಇದು. ರಾಯಬಾಗ ತಾಲ್ಲೂಕಿನ ಗ್ರಾಮವೊಂದರಲ್ಲಿ ಎಂಟು ವರ್ಷದ ಬಾಲಕಿ ಮೇಲೆ ಅತ್ಯಾ ಚಾರವೆಸಗಿ, ಕೊ*ಲೆ ಮಾಡಿದ ಭರತೇಶ ರಾವಸಾಹೇಬ ಮಿರ್ಜಿ ಎಂಬಾತನಿಗೆ ಬೆಳಗಾವಿ ಜಿಲ್ಲಾ ಪೋಕ್ಸೊ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.

ಬಾಲಕಿ ಮೇಲೆ ಅತ್ಯಾ ಚಾರ, ಕೊಲೆ ಮಾಡಿದ್ದ ಭರತೇಶ ಮಿರ್ಜಿಗೆ ಗಲ್ಲು ಶಿಕ್ಷೆಯ ಜೊತೆಗೆ ₹45 ಸಾವಿರ ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ. ಬಾಲಕಿಯ ಪಾಲಕರಿಗೆ ₹10 ಲಕ್ಷ ಪರಿಹಾರವನ್ನೂ ಘೋಷಿಸಿದೆ. ದಂಡ ಪಾವತಿಗೆ ತಪ್ಪಿದ್ದಲ್ಲಿ ಒಂದು ವರ್ಷ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕು. ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಸಂತ್ರಸ್ತೆಯ ಪೋಷಕರಿಗೆ ₹10 ಲಕ್ಷ ಪರಿಹಾರ ಒದಗಿಸುವಂತೆ ಆದೇಶ ನೀಡಿದ್ದಾರೆ.

17-10-2019 ರಂದು ಬಾಲಕಿಯನ್ನು ಅತ್ಯಾಚಾರ ಮಾಡಿದ್ದ ಪಾಪಿ ರಾವಸಾಹೇಬ ಮಿರ್ಜಿ, ಬಳಿಕ ಆಕೆಯನ್ನು ಬರ್ಬರವಾಗಿ ಕೊಂದು ಬಾವಿಯೊಂದರಲ್ಲಿ ಎಸೆದಿದ್ದ.

ಕುಡಚಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 120/19 ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಸಿ.ಎಂ ಪುಷ್ಪಲತಾ, ಗಲ್ಲು ಶಿಕ್ಷೆ & ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣ ಭೇದಿಸಲು ಸಹಕರಿಸಿದ ಅಧಿಕಾರಿಗಳಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್‌.ವಿ.ಪಾಟೀಲ ವಾದ ಮಂಡಿಸಿದ್ದರು.

2019ರ ಅಕ್ಟೋಬರ್‌ 15ರಂದು ಬಾಲಕಿ ಮನೆಯಿಂದ ಚಾಕೊಲೇಟ್‌ ತರಲು ಅಂಗಡಿಗೆ ಹೋಗಿದ್ದಳು. ಮರಳುವಾಗ ಭರತೇಶ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಬಾಲಕಿ ಕಿರುಚಾಡಿದಾಗ ಕುತ್ತಿಗೆ ಹಿಸುಕಿ ಸಾಯಿಸಿದ್ದ.

ಸಾಕ್ಷ್ಯ ನಾಶಪಡಿಸಲು ಬರೋಬ್ಬರಿ 20 ಕೆಜಿ ತೂಕದ ಕಲ್ಲನ್ನು ಬಾಲಕಿ ದೇಹಕ್ಕೆ ಕಟ್ಟಿ, ತನ್ನ ಮನೆ ಬಳಿಯ ತೆರೆದ ಬಾವಿಗೆ ಎಸೆದಿದ್ದ. ಬಾಲಕಿ ಕಾಣೆಯಾದ ಬಗ್ಗೆ ಪಾಲಕರು ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ ಜೆ.ಎಸ್.ಉಪ್ಪಾರ, ಬೆಳಗಾವಿಯಿಂದ ಶ್ವಾನದಳ ಕರೆಯಿಸಿ ಬಾಲಕಿ ಚಲನವಲನ ಪತ್ತೆ ಮಾಡಿದ್ದರು.

ಮನೆಯಲ್ಲಿನ ಬಾಲಕಿ ಬಟ್ಟೆಗಳ ವಾಸನೆ ಗ್ರಹಿಸಿದ ಶ್ವಾನಗಳು, ತೆರೆದಬಾವಿ ಬಳಿ ಬಂದವು. ಕೊಳವೆಬಾವಿ ದುರಸ್ತಿಗೆ ಬಳಸುತ್ತಿದ್ದ ಕ್ಯಾಮೆರಾ ಬಾವಿಗೆ ಇಳಿಸಿದಾಗ ಬಾಲಕಿಯ ಬೆರಳು ಕಾಣಿಸಿದ್ದವು. ನೀರು ಖಾಲಿ ಮಾಡಿ, ಬಾಲಕಿ ದೇಹ ತೆಗೆಯಲಾಗಿತ್ತು. ಬಾಲಕಿ ಸೊಂಟಕ್ಕೆ ಸೀರೆಯಿಂದ ಕಲ್ಲು ಕಟ್ಟಿ ಬಾವಿಗೆ ಎಸೆದಿದ್ದು ಗೊತ್ತಾಗಿತ್ತು.

ಡಾ.ಕೆ.ಎಸ್.ಗುರುದತ್ ಮರಣೋತ್ತರ ಪರೀಕ್ಷೆ ವರದಿ ಸಲ್ಲಿಸಿದ್ದರು. ಮುಂದಿನ ತನಿಖಾಧಿಕಾರಿಗಳಾದ ಎನ್.ಮಹೇಶ ಮತ್ತು ಕೆ.ಎಸ್.ಹಟ್ಟಿ ಅವರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ.ಎಂ.ಪುಷ್ಪಲತಾ ಅವರು ಇದೀಗ ತೀರ್ಪು ಪ್ರಕಟಿಸಿದ್ದಾರೆ.

RELATED ARTICLES
- Advertisment -
Google search engine

Most Popular