Friday, April 4, 2025
Google search engine

Homeರಾಜ್ಯಕವಿ, ನಾಟಕಕಾರ ಪ್ರೊ. ಸಿದ್ದಲಿಂಗಯ್ಯ ರವರ ಸಾಹಿತ್ಯ ಕೊಡುಗೆ ಕಾರ್ಯಕ್ರಮ

ಕವಿ, ನಾಟಕಕಾರ ಪ್ರೊ. ಸಿದ್ದಲಿಂಗಯ್ಯ ರವರ ಸಾಹಿತ್ಯ ಕೊಡುಗೆ ಕಾರ್ಯಕ್ರಮ

ಚಾಮರಾಜನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕವಿ, ನಾಟಕಕಾರ , ಪ್ರೊ. ಸಿದ್ದಲಿಂಗಯ್ಯ ರವರ ಸಾಹಿತ್ಯ ಕೊಡುಗೆ ಕುರಿತು ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕವಿ ಸಿದ್ದಲಿಂಗಯ್ಯನವರ ಭಾವಚಿತ್ರಕ್ಕೆ ಮಾಜಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಗಮಲ್ಲಪ್ಪನವರು ಪುಷ್ಪಾರ್ಚನೆಯನ್ನು ನೆರವೇರಿಸಿ ಮಾತನಾ,ಡಿ ಕವಿ ಸಿದ್ದಲಿಂಗಯ್ಯನವರು ಶ್ರೇಷ್ಠ ಸಾಹಿತಿಗಳಾಗಿ ನಾಡಿನ ಸಾಮಾಜಿಕ ಕಳಕಳಿಯ ಹಾಗೂ ನೊಂದವರ ಧ್ವನಿಯಾಗಿ ಸಾಹಿತ್ಯ ರಚನೆ ಮಾಡಿದವರು. ಸಿದ್ದಲಿಂಗಯ್ಯನವರ ಸಾಹಿತ್ಯದ ವಿಚಾರ ಪೂರ್ಣ ಬರವಣಿಗೆಯಿಂದ ಸಮಾಜದಲ್ಲಿ ಸಾಕಷ್ಟು ಪರಿವರ್ತನೆ ಉಂಟಾಗಿ ಹೊಸತನ ಮೂಡಿತು . ಕವಿಯ ಸಿದ್ದಲಿಂಗಯ್ಯನವರ ಏಕಲವ್ಯ ನಾಟಕ, ಊರುಕೇರಿ ,ಯಾರಿಗೆ ಬಂತು 47ರ ಸ್ವಾತಂತ್ರ್ಯ  ಜನರ ಗಮನ ಸೆಳೆಯಿತು.

ವಿಧಾನ ಪರಿಷತ್ತಿನ ಸದಸ್ಯರಾಗಿ ನಾಡು, ನುಡಿ ,ಜಲ ,ಭಾಷೆಯ ಸಾಹಿತ್ಯ ಸಂಸ್ಕೃತಿಯ ಚಿಂತನೆಯನ್ನು ನೆರವೇರಿಸಿದವರು ಎಂದು ತಿಳಿಸಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಲವಾರು ಕಾರ್ಯಕ್ರಮಗಳನ್ನು ವಿಭಿನ್ನವಾಗಿ ಆಚರಿಸುತ್ತಿರುವುದು ಸಂತೋಷವೆಂದರು.

ಕವಿ ಸಿದ್ದಲಿಂಗಯ್ಯನವರ ಕುರಿತು ಚಾಮರಾಜನಗರ ವಿಶ್ವವಿದ್ಯಾಲಯದ ಅಧ್ಯಾಪಕರಾದ ಮಹದೇವಸ್ವಾಮಿ ಮಾತನಾಡಿ ಕವಿ ಸಿದ್ದಲಿಂಗಯ್ಯನವರ ಚಿಂತನೆಗಳು ಸಾಮಾಜಿಕವಾಗಿ ನೊಂದವರ ಪರವಾಗಿ  ಮೂಡಿತು. ಅವರ ಚಿಂತನೆಗಳು ಬಡವರ ಹಾಗೂ ನೋಂದವರ ಶಕ್ತಿಯಾಗಿ ಹೊರಹೊಮ್ಮಿತು. ಸಿದ್ದಲಿಂಗಯ್ಯನವರ ವ್ಯಕ್ತಿತ್ವ ಮೆದು ಸ್ವರೂಪವಾಗಿದ್ದರು ಅವರ ಸಾಹಿತ್ಯದಲ್ಲಿರೋಷಾವೇಶ, ಅಪಾರವಾದ ಶಕ್ತಿ  ತುಂಬಿತ್ತು ಎಂದರು.

ಸಭೆಯ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ವಹಿಸಿ ಮಾತನಾಡಿ ಸಾಹಿತ್ಯದ ಧೀಮಂತ ಪ್ರತಿಭೆ.ಕಾವ್ಯ, ನಾಟಕ, ಪ್ರಭಂದ, ವಿಮರ್ಶೆ, ಸಂಶೋಧನೆ, ಆತ್ಮಕಥನ ಎಲ್ಲಾ ಪ್ರಕಾರಗಳಲ್ಲಿಯೂ ಸಾಹಿತ್ಯ ರಚಿಸಿದರು.  ಸದಾ ಕಾಲ ಪುಸ್ತಕಗಳ ಓದುಗರಾಗಿದ್ದ ಸಿದ್ದಲಿಂಗಯ್ಯನವರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ವ್ಯಕ್ತಿ . ಸಾಹಿತ್ಯದ ಮೂಲಕ ಪ್ರೀತಿಯ ಸಮಾಜ ಕಟ್ಟೋಣ  ಎಂದರು.

ಪ್ರತಿ ಮಂಗಳವಾರ ಸಂಜೆ 6 ಗಂಟೆಗೆ ಸಾಹಿತ್ಯ ಚಿಂತನೆ, ಗಾಯನ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.

 ಕಾರ್ಯಕ್ರಮದಲ್ಲಿ  ಕನ್ನಡ ಚಳುವಳಿಗಾರ ಶಾ ಮುರಳಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ  ಕಲೆ ನಟರಾಜು,  ಸರಸ್ವತಿ, ಸುರೇಶ್ ಗೌಡ, ಶಿವಣ್ಣ,  ವೆಂಕಟೇಶ್ ಬಾಬು,ಲಕ್ಷ್ಮೀನರಸಿಂಹ, ಸಿರಿಗನ್ನಡ ಗೋವಿಂದರಾಜು,  ಬೊಮ್ಮಾಯಿ, ಮಹೇಶ್ ಗೌಡ, ದೊರೆರಾಜು, ನಾಗೇಶ್, ಮುತ್ತುರಾಜು, ಇದ್ದರು.

ಕಲೆ ನಟರಾಜು, ರವಿಚಂದ್ರ ಪ್ರಸಾದ್, ಶಿವು, ಮುತ್ತುರಾಜು ಸಿದ್ದಲಿಂಗಯ್ಯನವರ ಗೀತೆಗಳ ಗಾಯನ ನಡೆಸಿಕೊಟ್ಟರು.

RELATED ARTICLES
- Advertisment -
Google search engine

Most Popular