Sunday, April 20, 2025
Google search engine

Homeಸ್ಥಳೀಯನವೋದಯ ಶಾಲೆಗೆ ಕವನ ಮತ್ತು ಬಿ.ಎಸ್.ವಿಸ್ಮಿತ ಆಯ್ಕೆ

ನವೋದಯ ಶಾಲೆಗೆ ಕವನ ಮತ್ತು ಬಿ.ಎಸ್.ವಿಸ್ಮಿತ ಆಯ್ಕೆ


ಕೆ.ಆರ್.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀರವಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿಂದ ನವೋದಯ ಶಾಲೆಗೆ ವಿದ್ಯಾರ್ಥಿಗಳಾದ ಕವನ ಮತ್ತು ಬಿ.ಎಸ್.ವಿಸ್ಮಿತ ರವರು ಆಯ್ಕೆಯಾಗಿದ್ದಾರೆ.
ತಾಲ್ಲೂಕಿನಲ್ಲಿ ೬೦೦ಕ್ಕೂ ಹೆಚ್ಚು ಮಕ್ಕಳು ನವೋದಯ ಪರೀಕ್ಷೆ ಎದುರಿಸಿದ್ದು ಅವರುಗಳಲ್ಲಿ ಎಂಟು ಮಕ್ಕಳು ನವೋದಯ ಪ್ರವೇಶಕ್ಕೆ ಆಯ್ಕೆಯಾಗಿದ್ದಾರೆ. ನವೋದಯ ಪರೀಕ್ಷೆಯಲ್ಲಿ ಯಶಸ್ವಿಯಾಗಿರುವ ಈ ಇಬ್ಬರು ವಿದ್ಯಾರ್ಥಿಗಳನ್ನು ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು, ಕ್ಷೇತ್ರಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಮು, ಕ್ಷೇತ್ರ ಸಮನ್ವಯಾಧಿಕಾರಿ ಲಿಂಗರಾಜು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರುಗಳು, ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರು ಅಭಿನಂದಿಸಿದ್ದಾರೆ.

RELATED ARTICLES
- Advertisment -
Google search engine

Most Popular