ರಾಯಚೂರು:ರಾಜಕೀಯದಲ್ಲಿ ಚುನಾವಣೆ ಬಂದಾಗ ಧೃವೀಕರಣ ಸಾಮಾನ್ಯವಾಗಿದ್ದು ನನಗೆ ಕಾಂಗ್ರೆಸ್ ನಾಯಕರಿಂದ ಯಾವುದೇ ಆಹ್ವಾನ ಬಂದಿಲ್ಲ ಎಂದು ಮಾಜಿ ಸಂಸದ ಬಿ.ವಿ ನಾಯಕ್ ಲೋಕಸಭೆ ಚುನಾವಣೆ ಹಿನ್ನೆಲೆ ಆಪರೇಷನ್ ಹಸ್ತ ವಿಚಾರವಾಗಿ ರಾಯಚೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.
ರಾಜಕೀಯದಲ್ಲಿ ಚುನಾವಣೆ ಬಂದಾಗ ಧೃವೀಕರಣ ಸಾಮಾನ್ಯ,ಊಹಾಪೋಹಗಳು ಬರುತ್ತವೆ ಎಲ್ಲದಕ್ಕೂ ಉತ್ತರ ಕೊಡಲ್ಲ. ಡಿ.ಕೆ.ಸುರೇಶ್ ಸ್ನೇಹಿತರು ಆಗಾಗ ಭೇಟಿಯಾಗುತ್ತಿರುತ್ತೇವೆ.ಅವರ ಜೊತೆಗಿನ ಫೋಟೋ ಹಳೆಯದು ಇತ್ತೀಚೆಗೆ ಅವರನ್ನ ಭೇಟಿಯಾಗಿಲ್ಲ,ಚುನಾವಣೆ ಸಮಯದಲ್ಲಿ ಏನಾದರೂ ಆಗಬಹುದು. ವಾತಾವರಣ ಬೆಳಿಗ್ಗೆ ಒಂದು ರೀತಿ ಇದ್ದರೆ ಸಂಜೆ ಇನ್ನೊಂದು ರೀತಿ ಇರುತ್ತೆ.ರಾಜಕಾರಣದಲ್ಲಿ ಧೃವಿಕರಣ ಸಾಮಾನ್ಯ ಪಕ್ಷಕ್ಕೆ ಲೀಡರ್‌ಗಳು ಬರುವುದರಿಂದ ಸೋಲು ಗೆಲುವುಗಳು ಆಗಲ್ಲ, ಕಾಂಗ್ರೆಸ್ ನಿಂದ ಯಾವುದೇ ಆಹ್ವಾನಬಂದಿಲ್ಲ. ಪಕ್ಷ ಬಿಡುವ ವಿಚಾರ ಮಾಡಿಲ್ಲ ಯಾವುದೇ ಮನಸ್ತಾಪ ಕೂಡ ಇಲ್ಲ. ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲ್ಲಾ ಕಾಂಗ್ರೆಸ್ ಪಕ್ಷದಿಂದ ನನಗೆ ಅನ್ಯಾಯವಾಗಿಲ್ಲ, ಕೆಲ ವ್ಯಕ್ತಿಗಳಿಂದ ನೋವಾಗಿ ಪಕ್ಷ ತೊರೆದಿದ್ದೆ. ವಿಧಾನಸಭಾ ಚುನಾವಣೆ ವೇಳೆ ನನ್ನ ಪರಸ್ಥಿತಿ ಡೋಲಾಯಮಾನವಾಗಿತ್ತು. ಒಂದೊಂದು ಪಕ್ಷಕ್ಕೆ ಒಂದೊಂದು ಸಿದ್ದಂತ ಇರುತ್ತೆ, ನಾವು ಪದೇ ಪದೇ ಪಕ್ಷ ಬದಲಿಸಿದರೆ ವ್ಯಕ್ತಿತ್ವ ಉಳಿಯಲ್ಲ ಕಾಂಗ್ರೆಸ್ ಪಕ್ಷದ ಹಳೆಯ ಸ್ನೇಹಿತರಿಂದ ಕೆಲ ಮಾಹಿತಿಯಿದೆ ಆದ್ರೆ ಅದು ಊಹಾಪೋಹ ಎಂದು ಪ್ರತಿಕ್ರಿಯಿಸಿದ್ದಾರೆ.