Monday, August 4, 2025
Google search engine

Homeರಾಜ್ಯಸುದ್ದಿಜಾಲವಿಟ್ಲದಲ್ಲಿ ಅಕ್ರಮ ಕೆಂಪು ಕಲ್ಲು ಸಾಗಾಟ ಭೇದಿಸಿದ ಪೊಲೀಸರು: ಎರಡು ಲಾರಿ ಮತ್ತು ಚಾಲಕರು ವಶಕ್ಕೆ

ವಿಟ್ಲದಲ್ಲಿ ಅಕ್ರಮ ಕೆಂಪು ಕಲ್ಲು ಸಾಗಾಟ ಭೇದಿಸಿದ ಪೊಲೀಸರು: ಎರಡು ಲಾರಿ ಮತ್ತು ಚಾಲಕರು ವಶಕ್ಕೆ

ಮಂಗಳೂರು (ದಕ್ಷಿಣ ಕನ್ನಡ): ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಲಾರಿ ಮತ್ತು ಇಬ್ಬರು ಚಾಲಕರನ್ನು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಟ್ಲ ಪೊಲೀಸ್ ಠಾಣೆಯವರು ಸಿಬ್ಬಂದಿಗಳೊಂದಿಗೆ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಉಕ್ಕಡ ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ ಎರಡು ಲಾರಿಗಳು ಬರುತ್ತಿದ್ದನ್ನು ನೋಡಿ, ಅವುಗಳನ್ನು ನಿಲ್ಲಿಸಿ, ತಪಾಸಣೆ ನಡೆಸಲಾಗಿ ಅದರಲ್ಲಿ ತಲಾ 500 ಕೆಂಪು ಕಲ್ಲುಗಳಿತ್ತು. ಕೆಂಪು ಕಲ್ಲು ಸಾಗಾಟದ ಬಗ್ಗೆ ಪರವಾನಿಗೆಯನ್ನು ಎರಡು ಲಾರಿಗಳ ಚಾಲಕರಲ್ಲಿ ಕೇಳಲಾಗಿ ಪರವಾನಿಗೆ ಇಲ್ಲವೆಂದು ಹಾಗೂ KA 01 AJ 9542 ನೇ ಲಾರಿಗೆ ಕೇರಳ ರಾಜ್ಯದ ಪೆರ್ಲ ಎಂಬಲ್ಲಿಂದ ಕಲ್ಲುಗಳನ್ನು ಜಾಫರ್ ಎಂಬುವರು ಅಕ್ರಮವಾಗಿ ತುಂಬಿಸಿ ಕಳುಹಿಸಿರುವುದಾಗಿ, KA 50 AF 3229 ನೇ ಲಾರಿಯಲ್ಲಿ ಕೇರಳ ರಾಜ್ಯದ ಧರ್ಮತ್ತಡ್ಕ ಎಂಬಲ್ಲಿಂದ ನಾಸೀರ್ ಎಂಬುವರು ಅಕ್ರಮವಾಗಿ ತುಂಬಿಸಿ ಕಳುಹಿಸಿರುವುದಾಗಿ ತಿಳಿಸಿರುತ್ತಾರೆ.

ಈ ಲಾರಿಗಳನ್ನು ಹಾಗೂ ಚಾಲಕರುಗಳನ್ನು ವಶಕ್ಕೆ ಪಡೆದು, ಯಾವುದೇ ಪರವಾನಿಗೆ ಅಥವಾ ದಾಖಲಾತಿ ಇಲ್ಲದೆ ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಕಳ್ಳತನದಿಂದ ತುಂಬಿಸಿಕೊಂಡು ಸಾಗಾಟ ಮಾಡಿದ ಹಿನ್ನೆಲೆಯಲ್ಲಿ ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರ 94/2025 ಕಲಂ: 303(2) ಬಿ ಎನ್ ಎಸ್ ಮತ್ತು 4(1) , 21 , MMRD act and U/s 3,44 KMMCR Act ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

RELATED ARTICLES
- Advertisment -
Google search engine

Most Popular