ಮಂಗಳೂರು( ದಕ್ಷಿಣ ಕನ್ನಡ): ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಆರೋಪಿಸಿದ್ದಾರೆ. ಅವರು ಇಂದು ಮಂಗಳೂರಿನಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ ವೇಗ ಕಡಿಮೆಯಾಗಿದ್ದು, ಇದೀಗ ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಪೊಲೀಸ್ ಇಲಾಖೆ ಮಾಡ್ತಿದೆ, ಸಾಮಾಜಿಕ ತಾಣ ಹಾಗೂ ಭಾಷಣ ಮಾಡೋರಿಗೆ ನೊಟೀಸ್ ನೀಡಲಾಗ್ತಿದೆ. ಪ್ರತಿಭಟನೆ ಮಾಡುವವರಿಗೆ ಇನ್ನಿಲ್ಲದ ನಿಬಂಧನೆಗಳನ್ನು ಹಾಕಲಾಗುತ್ತಿದ್ದು, ಹೊಸ ಹೊಸ ಕಾನೂನುಗಳನ್ನು ತಂದು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡಲಾಗ್ತಿದೆ ಎಂದು ಆರೋಪಿಸಿದರು.