ನವದೆಹಲಿ: ಮಹಿಳಾ ವೈದ್ಯರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಅದೇ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿಯನ್ನು ಬಂಧಿಸಲು ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಾರ್ಡ್‌ನೊಳಗೆ ಪ್ರವೇಶಿಸಿದ ಉತ್ತರಾಖಂಡ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆಯ ವಿಡಿಯೋ ವೈರಲ್ ಆಗಿದ್ದು, ವೈದ್ಯರಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಯನ್ನು ಆಸ್ಪತ್ರೆಯ ಆಡಳಿತ ಮಂಡಳಿ ಸೇವೆಯಿಂದ ಅಮಾನತುಗೊಳಿಸಿದೆ. ಆರೋಪಿಯು ಮಹಿಳಾ ವೈದ್ಯರಿಗೆ ಲೈಂಗಿಕ ದೌರ್ಜನ್ಯವೆಸಗಿದ್ದು, ನಂತರ ತನ್ನ ಕೃತ್ಯಕ್ಕೆ ಕ್ಷಮಿಸುವಂತೆ ಸಂದೇಶವನ್ನು ಕಳಿಸಿದ್ದ. ಘಟನೆಯಿಂದ ಮಹಿಳಾ ವೈದ್ಯರು ಮಾನಸಿಕವಾಗಿ ಹಿಂಸೆಗೊಳಗಾದ ನಂತರ ಆಸ್ಪತ್ರೆ ಮಂಡಳಿ ಆಂತರಿಕ ತನಿಖೆ ಕೈಗೊಂಡು ಪೊಲೀಸರಿಗೆ ದೂರು ದಾಖಲಿಸಿದೆ.
ವೈದ್ಯರ ದೂರಿನ ಆಧಾರದ ಮೇಲೆ ಆರೋಪಿಯನ್ನು ಅಮಾನತುಗೊಳಿಸಲಾಗಿದೆ.ಆಂತರಿಕ ದೂರು ಮಂಡಳಿ ಪೊಶ್ ಕಾಯ್ದೆಯ ಅನುಗುಣವಾಗಿ ತನಿಖೆ ಕೈಗೊಂಡಿದೆ. ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಏಮ್ಸ್‌ನ ಪಿಆರ್‌ಒ ಸಂದೀಪ್ ಕುಮಾರ್ ತಿಳಿಸಿದ್ದಾರೆ.