Sunday, April 20, 2025
Google search engine

Homeಸ್ಥಳೀಯ೧೩೫ ಮೊಬೈಲ್ ಪತ್ತೆ ಹಚ್ಚಿದ ಪೊಲೀಸರು

೧೩೫ ಮೊಬೈಲ್ ಪತ್ತೆ ಹಚ್ಚಿದ ಪೊಲೀಸರು

ಮೈಸೂರು: ಸಿಇಐಆರ್ ತಂತ್ರಾಶದಲ್ಲಿ ಸಾರ್ವಜನಿಕರು ಮೊಬೈಲ್ ಕಳೆದುಕೊಂಡಿರುವ ಬಗ್ಗೆ ದಾಖಲಿಸಿದ್ದ ದೂರಿನನ್ವಯ ಸೈಬರ್ ಕ್ರೈಂ, ಮಾದಕ ದ್ರವ್ಯ, ಆರ್ಥಿಕ ಅಪರಾಧ (ಸಿಇಎನ್) ಪೊಲೀಸರು ವಶಪಡಿಸಿಕೊಂಡ ೧೩೫ ಮೊಬೈಲ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದರು.
ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗುರುವಾರ ಸೆನ್ ಪೊಲೀಸರು ಪತ್ತೆ ಹಚ್ಚಿದ ೩೦ ಲಕ್ಷ ರೂ. ಮೌಲ್ಯದ ೧೩೫ ಮೊಬೈಲ್‌ಗಳನ್ನು ಗುರುವಾರ ಸಂಜೆ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ವಾರಸುದಾರರಿಗೆ ಹಿಂತಿರುಗಿಸಿದರು. ಇದಕ್ಕೂ ಮುನ್ನ ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್‌ಗಳ ಪತ್ತೆಗೆ ಆನ್‌ಲೈನ್ ಮೂಲಕ ಕೆಎಸ್‌ಪಿ ಅಪ್ಲಿಕೇಷನ್‌ನಲ್ಲಿ ಈ ಲಾಸ್ಟ್ ದೂರು ದಾಖಲಿಸಿ, ಸ್ವೀಕೃತಿ ಪಡೆದು ನಂತರ ಮೊಬೈಲ್ ಹಾಗೂ ದೂರಿನ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಸಿಇಐಆರ್ (ಸೆಂಟ್ರಲ್ ಎಕ್ಯೂಪ್‌ಮೆಂಟ್ ಐಡೆಂಟಿಟಿ ರಿಜಿಸ್ಟಾರ್) ಪೋರ್ಟಲ್‌ನಲ್ಲಿ ಹಾಗೂ ೬೩೬೩೨೫೫೧೩೫ ನಂಬರ್‌ಗೆ ಹಾಯ್ ಎಂದು ಮೆಸೇಜ್ ಮಾಡುವ ಮೂಲಕ ೨೦೨೨ರ ಸೆಪ್ಟಂಬರ್‌ನಿಂದ ೩೦೭೫ ಮಂದಿ ದೂರು ದಾಖಲಿಸಿದ್ದರು. ಈವರೆಗೆ ಮೈಸೂರು ಸೆನ್ ಪೊಲೀಸರು ೨೭೦ ಮೊಬೈಲ್‌ಗಳನ್ನು ಪತ್ತೆ ಮಾಡಿದ್ದು, ವಾರಸುದಾರರಿಗೆ ಹಿಂತಿರುಗಿಸಲಾಗಿದೆ ಎಂದು ತಿಳಿಸಿದರು.
ನಗರ ವ್ಯಾಪ್ತಿಯಲ್ಲಿ ಮೊಬೈಲ್ ಕಳವು ಮತ್ತು ಕಳೆದು ಹೋಗಿರುವುದನ್ನು ಪತ್ತೆ ಮಾಡುವ ಸಲುವಾಗಿ ಸೆನ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯಿರುವ ವಿಶೇಷ ತಂಡ ರಚನೆ ಮಾಡಲಾಗಿತ್ತು. ತಂಡ ದೂರು ದಾಖಲಾಗಿರುವ ಎಲ್ಲಾ ಮಾಹಿತಿ ಪಡೆದುಕೊಂಡು ಸಿಇಐಆರ್ ತಂತ್ರಾಂಶದಿಂದ ಕಳೆದ ಒಂದು ತಿಂಗಳಲ್ಲಿ ೩೦ ಲಕ್ಷ ರೂ. ಮೌಲ್ಯದ ೧೩೫ ಮೊಬೈಲ್‌ಗಳನ್ನು ಪತ್ತೆ ಹಚ್ಚಲಾಗಿದೆ ಎಂದರು.
ಈ ಪತ್ತೆ ಕಾರ್ಯವನ್ನು ಡಿಸಿಪಿ ಎಂ.ಮುತ್ತುರಾಜು ಮಾರ್ಗದರ್ಶನದಲ್ಲಿ ಎಸಿಪಿ ಶಾಂತಮಲ್ಲಪ್ಪ ನೇತೃತ್ವದಲ್ಲಿ ಸೆನ್ ಕ್ರೈಂ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎನ್.ಜಯಕುಮಾರ್, ಪಿಎಸ್‌ಐ ಎನ್.ಅನೀಲ್ ಕುಮಾರ್, ಎಂ.ಎಲ್.ಸಿzಶ್, ಎಎಸ್‌ಐ ಸುಭಾಷ್‌ಚಂದ್ರ ಮತ್ತು ಷರೀಫ್, ರವಿಕುಮಾರ್ ಮತ್ತು ಸಿಬ್ಬಂದಿ ಮಾಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಎಂ.ಮುತ್ತುರಾಜು, ಎಸ್.ಜಾಹ್ನವಿ, ಎಸಿಪಿ ಶಾಂತಮಲ್ಲಪ್ಪ ಇದ್ದರು.
ಹೊರ ರಾಜ್ಯದಲ್ಲಿದ್ದ ೩೦ ಮೊಬೈಲ್: ಕಳವು ಮತ್ತು ಕಾಣೆಯಾದ ೧೩೫ ಮೊಬೈಲ್‌ಗಳ ಪೈಕಿ ೩೦ ಮೊಬೈಲ್‌ಗಳು ಉತ್ತರ ಪ್ರದೇಶ, ಪಶ್ಚಿಮಬಂಗಾಳ, ಅಸ್ಸಾಂ, ಕೇರಳಾ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪತ್ತೆ ಮಾಡಿ, ವಶಕ್ಕೆ ಪಡೆಯಲಾಗಿದೆ. ಮೊಬೈಲ್‌ಗಳನ್ನು ಕಳವು ಮಾಡಿದವರು ಕಡಿಮೆ ಹಣಕ್ಕೆ ಅಪರಿಚಿತರಿಗೆ ಮಾರಾಟ ಮಾಡುವುದರಿಂದ ಕಳವು ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚುವುದು ಕ್ಲಿಷ್ಟಕರವಾಗಿದೆ. ಸಧಕ್ಕೆ ಈ ತಂತ್ರಾಂಶದಲ್ಲಿ ಕಳವು ಮತ್ತು ಕಾಣೆಯಾದ ಮೊಬೈಲ್‌ಗಳನ್ನು ಪತ್ತೆಹಚ್ಚಬಹುದೇ ಹೊರತು ಆರೋಪಿಗಳನ್ನಲ್ಲ ಎಂದು ಆಯುಕ್ತ ರಮೇಶ್ ಮಾಹಿತಿ ನೀಡಿದರು.

RELATED ARTICLES
- Advertisment -
Google search engine

Most Popular