Saturday, September 6, 2025
Google search engine

Homeರಾಜ್ಯಸುದ್ದಿಜಾಲಗೊಂದಲದ ನಡುವೆ ಸಾರ್ವಜನಿಕರಿಗೆ ಗುಡ್ ನ್ಯೂಸ್ ನೀಡಿದ ಪೊಲೀಸರು : ಮೆರವಣಿಗೆಯ ದಿನ ಆಹಾರ ಅಂಗಡಿಗಳಿಗೆ...

ಗೊಂದಲದ ನಡುವೆ ಸಾರ್ವಜನಿಕರಿಗೆ ಗುಡ್ ನ್ಯೂಸ್ ನೀಡಿದ ಪೊಲೀಸರು : ಮೆರವಣಿಗೆಯ ದಿನ ಆಹಾರ ಅಂಗಡಿಗಳಿಗೆ ಹೆಚ್ಚುವರಿ ಅನುಮತಿ

ಬೆಳಗಾವಿ: ಗೊಂದಲದ ಮಧ್ಯೆಯೂ ಗುಡ್ ನ್ಯೂಸ್ ನೀಡಿದ ಪೊಲೀಸರು
ಬೆಳಗಾವಿಯ ಜಿಲ್ಲೆಯಲ್ಲಿ ಅದ್ಧೂರಿ ಗಣೇಶೋತ್ಸವ ನಡೆಯುತ್ತಿದ್ದು,6-ಶನಿವಾರ ಗಣೇಶ ವಿಸರ್ಜನಾ ಮೆರವಣಿಗೆ ನಡೆಯಲಿದೆ.

ಮೆರವಣಿಗೆ ಸಂಬಂಧ ಪೊಲೀಸರು ನೀಡಿದ ಸೂಚನೆಗಳಿಗೆ ಅನೇಕರು ಆಕ್ಷೇಪ ವ್ಯಾಕ್ತಪಡಿಸಿದ್ದರಿಂದ ಕೆಲವು ಗೊಂದಲಗಳು ನಿರ್ಮಾಣಗೊಂಡಿವೆ. ಸಾಸಕ ಅಭಯ ಪಾಟೀಲ ಕೂಡ ಪೊಲೀಸರ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಸಾರ್ವಜನಿಕರಿಗೆ ಪೊಲೀಸರು ಗುಡ್ ನ್ಯೂಸ್ ನೀಡಿದ್ದಾರೆ. ಶುಕ್ರವಾರ ಮತ್ತು ಶನಿವಾರ ಸಂಜೆ ಗಣೇಶ ಹಬ್ಬ ನೋಡಲು ಜನದಟ್ಟಣೆ ಹೆಚ್ಚಾಗಿರುವುದರಿಂದ, ಆಹಾರ ಮತ್ತು ಪಾನೀಯ ಅಂಗಡಿಗಳು ಸಂಪೂರ್ಣ ತೆರೆದಿರುತ್ತವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಜನದಟ್ಟಣೆ ಹೆಚ್ಚಿರುವುದರಿಂದ ಇಂದು ಹಾಗೂ ನಾಳೆ ತಡರಾತ್ರಿವರೆಗೂ ಆಹಾರ ಹಾಗೂ ಅಗತ್ಯ ಪಾನೀಯ ಅಂಗಡಿಗಳು ತೆರೆದಿರಲಿವೆ. ಪೊಲೀಸರು ತಡರಾತ್ರಿವರೆಗೂ ಅಂಗಡಿ ತೆರೆಯಲು ಅವಕಾಶ ನೀಡಿದ್ದಾರೆ. ಅಂಗಡಿ ಮುಚ್ಚುವಂತೆ ಬಲವಂತ ಮಾಡುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಇದರಿಂದಾಗಿ ಗಣೇಶ ಮೆರವಣಿಗೆ ನೊಡಲು ಹಳ್ಳಿ ಹಳ್ಳಿಗಳಿಂದ, ಬೇರೆ ಬೇರೆ ಜಿಲ್ಲಾಗಳಿಂದ ಆಗಮಿಸುವ ಸಾರ್ವಜನಿಕರು ಆಹಾರಕ್ಕಾಗಿ ಪರದಾಡಬೇಕಾಗಿಲ್ಲ. ರಾತ್ರಿಯಿಡೀ ಆಹಾರ ಲಭ್ಯವಾಗಲಿವೆ.

RELATED ARTICLES
- Advertisment -
Google search engine

Most Popular