ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ಹೊರವಲಯದ ಬೋಳಿಯಾರ್ ನಲ್ಲಿ ಆರೋಪಿಗಳ ಬಂಧನದ ಹೆಸರಿನಲ್ಲಿ ಪೊಲೀಸ್ ಕಮಿಷನರ್ ಅವರು ರಾತ್ರೊರಾತ್ರಿ ಪೊಲೀಸರನ್ನು ಮನೆಗಳಿಗೆ ಕಳುಹಿಸಿ ಗೂಂಡಾರಂತೆ ವರ್ತಿಸಿದ್ದಾರೆ ಎಂದು ಎಸ್ ಡಿಪಿಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಹೇಳಿದ್ದಾರೆ.
ಅವರು ತೊಕ್ಕೊಟ್ಟಿನಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಬೋಳಿಯಾರ್ ಪೊಲೀಸ್ ದೌರ್ಜನ್ಯದ ಘಟನೆಯನ್ನು ವಿರೋಧಿಸಿ ಮಾತನಾಡಿದ ಅವರು, ಜೈಲಿನಲ್ಲಿರುವ ಹೆಚ್ಚಿನವರು ಕಾಂಗ್ರೆಸ್ ಗೆ ಮತ ಹಾಕಿದವರು ಹಾಗೂ ಕಾಂಗ್ರೆಸ್ ಪರ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮುಸ್ಲಿಮರ ಮೇಲೆ ನಿರಂತರ ತಾರತಮ್ಯ ನೀತಿ ಮುಂದುವರೆದಿದೆ.
ಸಂಘಪರಿವಾರ ಹಾಗೂ ಬಿಜೆಪಿಯವರ ಮನೆಗಳಿಗೆ ಪೊಲೀಸರು ಹೋಗದ ಹಾಗೆ ತಡೆಯುತ್ತಿರುವವರು ಯಾರು?. ಮುಸ್ಲಿಮರನ್ನೇ ಬಂಧಿಸಬೇಕು ಎಂದು ಒತ್ತಡ ಹಾಕುವವರು ಯಾರು ಎಂಬುದನ್ನು ಸ್ಪಷ್ಟನೆ ನೀಡಬೇಕು ಎಂದು ಹೇಳಿದ್ದಾರೆ.
ಇಂತಹ ಘಟನೆಗಳು ಇದೇ ರೀತಿ ಮುಂದುವರೆದರೆ ದ.ಕ ಜಿಲ್ಲೆಯ ಅಲ್ಪಸಂಖ್ಯಾತರು ಒಟ್ಟಾಗಲಿದ್ದಾರೆ. ಯು.ಟಿ ಖಾದರ್ ಅವರು ಜನರು ನೀಡಿದ ಮತಕ್ಕಾಗಿ ನೀವು ಕೆಲಸ ಮಾಡಿ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು, ನವಾಜ್ ಉಳ್ಳಾಲ್, ಕ್ಷೇತ್ರಾಧ್ಯಕ್ಷ ಬಶೀರ್ ಎಸ್. ಎಮ್, ಜಿಲ್ಲಾ ಕಾರ್ಯದರ್ಶಿ ಸುಹೈಲ್ ಪಳ್ನಿರ್, ಬಂಧಿತ ಸಿರಾಜ್ ಪತ್ನಿ ಖೈರುನ್ನೀಸ ಉಪಸ್ಥಿತರಿದ್ದರು