Tuesday, November 25, 2025
Google search engine

Homeಸ್ಥಳೀಯಮೈಸೂರು ಕೇಂದ್ರಕಾರಾಗೃಹಕ್ಕೆ ಪೊಲೀಸರಿಂದ ದಿಢೀರ್ ದಾಳಿ

ಮೈಸೂರು ಕೇಂದ್ರಕಾರಾಗೃಹಕ್ಕೆ ಪೊಲೀಸರಿಂದ ದಿಢೀರ್ ದಾಳಿ

ಮೈಸೂರು: ಮೈಸೂರು ಕೇಂದ್ರ ಕಾರಾಗೃಹಕ್ಕೆ ಪೊಲೀಸರು ದಿಢೀರ್ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿದ್ದ ವಿಡಿಯೋ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು, ಇದೀಗ  ಈ ಬೆನ್ನಲ್ಲೆ ಎಚ್ಚತುಕೊಂಡಿರುವ ಮೈಸೂರಿನ ಪೊಲೀಸರು ಮೈಸೂರು ಕಾರಾಗೃಹಕ್ಕೆ  ದಿಢೀರ್ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಬಿಂದುಮಣಿ ನೇತೃತ್ವದಲ್ಲಿ ದಾಳಿಯಾಗಿದ್ದು, ಎಸಿಪಿಗಳು ಹಾಗೂ ವಿವಿಧ ಠಾಣೆಯ ನಿರೀಕ್ಷಕರುಗಳು ಸಾಥ್ ನೀಡಿದರು.  ಒಂದೆಡೆ ಗೃಹಸಚಿವ ಪರಮೇಶ್ವರ್ ಮೈಸೂರಿನ ನಜರಬಾದ್ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಇತ್ತ ಪೊಲೀಸರು ಕಾರಾಗೃಹದ ಮೇಲೆ ದಾಳಿ ನಡೆಸಿದ್ದು, ಸುಮಾರು 5 ಗಂಟೆಗಳ ಕಾಲ ಪರಿಶೀಲನೆ ನಡೆದಿದೆ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular