ವಿ.ಶ್ರೀನಿವಾಸಪ್ರಸಾದ್ ಒಂದು ನೆನಪು ಕಾರ್ಯಕ್ರಮಕ್ಕೆ ಚಾಲನೆ
ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಅಗಲಿದ ನಾಯಕರುಗಳ ನುಡಿ ನಮನ ಕಾರ್ಯಕ್ರಮ ಮಾಡುವಾಗ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಮಾಡಬೇಕು ಆಗ ಮಾತ್ರ ಆಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಕೆ.ಆರ್.ನಗರ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಮಂಗಳವಾರ ನಡೆದ ವಿ.ಶ್ರೀನಿವಾಸಪ್ರಸಾದ್ ಒಂದು ನೆನಪು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಶೋಷಿತರು ಮತ್ತು ದಮನಿತರ ಧ್ವನಿಯಾಗಿದ್ದ ಇವರನ್ನು ಸ್ಮರಿಸಬೇಕಾದುದು ನಮ್ಮೆಲರ ಆದ್ಯ ಕರ್ತವ್ಯ ಎಂದರು.
ಶ್ರೀನಿವಾಸಪ್ರಸಾದ್ ಅವರು ತಮ್ಮದೇ ಆದ ತತ್ವಾದರ್ಶ ಮತ್ತು ಹೋರಾಟದ ಮನೋಭಾವನೆಯನ್ನು ಬೆಳೆಸಿಕೊಂಡು ಆ ಮಾರ್ಗದಲ್ಲಿಯೇ ನಡೆದ ದಿಮಂತ ರಾಜಕಾರಣಿ. ಅವರ ಆದರ್ಶ ಗುಣಗಳನ್ನು ಇಂದಿನ ಯುವ ರಾಜಕಾರಣಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಬೇಕು ಎಂದು ಸಲಹೆ ನೀಡಿದರು.
ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದ ಅವಧಿಯಲ್ಲಿ ಪ್ರಸಾದ್ ರವರನ್ನು ಹಲವಾರು ಬಾರಿ ಭೇಟಿಯಾಗಿ ಮಾರ್ಗದರ್ಶನ ಪಡೆದುಕೊಂಡಿದ್ದು ಅವುಗಳನ್ನು ಇಂದಿಗೂ ನನ್ನ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸುತ್ತಿರುವುದರಿಂದ ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಯಿತೆಂದರು.
ಶ್ರೀನಿವಾಸಪ್ರಸಾದ್ ತಮ್ಮ ಅಧಿಕಾರದ ಅವಧಿಯಲ್ಲಿ ನನ್ನಂತಹಾ ಯುವ ರಾಜಕಾರಣಿಗಳನ್ನು ಗುರುತಿಸಿ ಸದಾ ಮಾರ್ಗದರ್ಶನ ಮಾಡುತ್ತಿದ್ದ ಅವರ ಗುಣ ಸರ್ವತ್ರ ಪ್ರಸ್ತುತವಾಗಿದ್ದು ಆಧುನಿಕ ಯುಗದಲ್ಲಿ ಜಾತ್ಯಾತೀತ ಸಮಾಜದ ನಿರ್ಮಾಣಕ್ಕೆ ನಾವೇಲ್ಲರೂ ಅವರ ಜೀವನ ಶೈಲಿಯನ್ನು ಅನುಕರಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಎಸ್.ಎಂ.ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ನೀಡುವುದರ ಜತೆಗೆ ಅಕ್ಷರ ದಾಸೋಹ ಯೋಜನೆ ಜಾರಿಗೆ ತರುವುದರ ಹಿಂದೆ ಇವರ ಸಲಹೆ ಮತ್ತು ಸಹಕಾರ ಅಪಾರವಾಗಿದ್ದು ಪ್ರಸಾದ್ ಮತ್ತು ನನ್ನ ನಡುವಿನ ಬಾಂಧವ್ಯ ಮೊಗೆದಷ್ಟು ಹಸಿರಾಗಿದ್ದು ಅಂತ ರಾಜಕೀಯ ನಾಯಕ ಅತ್ಯಂತ ಅಪರೂಪವಾಗಿದ್ದು ದಿವಂಗತರ ನೆನಪು ಎಲ್ಲರಿಗೂ ಅಜರಾಮರವಾಗಿರಲಿ ಎಂದರು.
ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ಜಿಲ್ಲಾ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಎ.ಆರ್.ಕಾಂತರಾಜು, ಮುಖಂಡ ಡಿ.ಕೆ.ಕೊಪ್ಪಲುರಾಜಯ್ಯ, ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸಿ.ಪಿ.ರಮೇಶ್, ಜಿ.ಪಂ. ಮಾಜಿ ಸದಸ್ಯರಾದ ರಾಜಯ್ಯ, ಮಾರ್ಚಳ್ಳಿಶಿವರಾಮು, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎಸ್.ಸಿದ್ದೇಗೌಡ, ಕಾಂಗ್ರೆಸ್ ಮುಖಂಡರಾದ ಗೀತಾಮಹೇಶ್, ನಂಜುAಡ, ಸಿದ್ದಯ್ಯ, ಚಂದ್ರು, ಗುರುಸ್ವಾಮಿ, ಹೊಸಕೋಟೆಚೆಲುವರಾಜು, ನಂಜಯ್ಯ, ಲಾಳನಹಳ್ಳಿಜಯಣ್ಣ, ಶಾಂತಿರಾಜ್, ನಿಂಗರಾಜು ಮತ್ತಿತರರು ಹಾಜರಿದ್ದರು.