Sunday, April 20, 2025
Google search engine

Homeರಾಜ್ಯಸಾಲಗಾರನಾಗಿ ರಾಜಕಾರಣ,ನನ್ನಂತ ರಾಜಕಾರಣಿ ದೇಶದಲ್ಲೇ ಇಲ್ಲ : ಜಿಟಿ ದೇವೇಗೌಡ

ಸಾಲಗಾರನಾಗಿ ರಾಜಕಾರಣ,ನನ್ನಂತ ರಾಜಕಾರಣಿ ದೇಶದಲ್ಲೇ ಇಲ್ಲ : ಜಿಟಿ ದೇವೇಗೌಡ

ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಜಿ.ಟಿ.ದೇವೇಗೌಡರು ಕಾಂಗ್ರೆಸ್ ವಿರುದ್ಧ ಹಾಗೂ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಸಾಲ ಮಾಡಿಕೊಂಡು ರಾಜಕಾರಣ ಮಾಡಿದ್ದೇನೆ. ನನ್ನಂತಹ ರಾಜಕಾರಣಿ ಕರ್ನಾಟಕ ರಾಜ್ಯದಲ್ಲಿ ಮಾತ್ರ ಅಲ್ಲ ಇಡೀ ದೇಶದಲ್ಲೇ ಯಾರು ಇಲ್ಲ ಎಂದು ತಮ್ಮ ವಿರುದ್ಧ ಬಂದ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಜಿ.ಟಿ.ದೇವೇಗೌಡರಿಗೆ ಮಾದಗಳ್ಳಿಯಲ್ಲಿ ೧ ಎಕರೆ ಜಾಗ ಕೊಟ್ಟಿದ್ದೇವೆ ಅಂತ ಸಿಎಂ ಸಿದ್ದರಾಮಯ್ಯ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಹೇಳಿದ್ದಾರೆ. ನನ್ನ ರಾಜಕೀಯ ಜೀವನ ನಿಮಗೆ ಗೊತ್ತಿಲ್ಲ. ನಾನು ಯಾವುದೇ ಒಂದು ಚೌಲ್ಟ್ರಿ, ಪೆಟ್ರೋಲ್ ಬಂಕ್, ಸ್ಕೂಲ್, ಕಮರ್ಷಿಯಲ್ ಬಿಲ್ಡಿಂಗ್ ಮಾಡಿಲ್ಲ ಎಂದು ಕಿಡಿ ಕಾರಿದರು.

ನನ್ನ ತಂದೆ ೧೫ ಎಕರೆ ಜಾಗ ಮಾಡಿದ್ದರು. ಪ್ರಗತಿಪರ ರೈತನಾಗಿ ದುಡಿದು ಪಕ್ಕದಲ್ಲಿ ಜಮೀನು ಖರೀದಿ ಮಾಡಿದ್ದೇನೆ. ಸಾಲಗಾರನಾಗಿ ರಾಜಕಾರಣ ಮಾಡುತ್ತಿದ್ದೇನೆ. ಮುಡಾದ ಶೇ.೯೦ರಷ್ಟು ಜಾಗ ಇರೋದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ. ಗೋವಿಂದರಾಜು ಅಧ್ಯಕ್ಷರಾಗಿದ್ದಾಗ ಜಯಲಕ್ಷ್ಮಿಪುರಂ ಬಾಡಿಗೆ ಮನೆಯಲ್ಲಿದ್ದೆ. ಲಾಟರಿಯಲ್ಲಿ ೫೦೮೦ ಸೈಟ್ ಬಂದಿದೆ. ಅದನ್ನು ಬಿಟ್ಟು ಬೇರೆ ಯಾವುದೇ ಸೈಟ್ ಪಡೆದಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಒಂದು ವಾರದೊಳಗೆ ನಗರಾಭಿವೃದ್ಧಿ ಸಚಿವರು ಉತ್ತರ ಕೊಡಬೇಕು. ಇಲ್ಲದಿದ್ದರೇ ನಾನೇ ಅವರಿಗೆ ನೋಟಿಸ್ ಜಾರಿ ಮಾಡುತ್ತೇನೆ. ನನ್ನ ವಿರುದ್ಧ ಮಾಡಿರುವ ಆರೋಪ ಸಾಬೀತು ಮಾಡದಿದ್ದರೆ ಸಚಿವರ ವಿರುದ್ಧ ಕಾನೂನು ಸಮರ ನಡೆಸುತ್ತೇನೆ. ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಸಚಿವ ಭೈರತಿ ಸುರೇಶ್ ವಿರುದ್ಧ ಹರಿಹಾಯ್ದರು.

ಮುಡಾ ಬಡಾವಣೆಗಳ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ವಿಫಲವಾಗಿದೆ. ಸಚಿವರು ಸತ್ಯಾಂಶ ಬಯಲು ಮಾಡಬೇಕು. ಏಳು ದಿನಗಳಲ್ಲಿ ದಾಖಲೆ ಸಮೇತ ಸಾಬೀತುಪಡಿಸಬೇಕು. ಅದು ಬಿಟ್ಟು ನನ್ನಂತಹ ಪ್ರಾಮಾಣಿಕನಿಗೆ ಏಕೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ೨೨೪ ಕ್ಷೇತ್ರಗಳ ಶಾಸಕರ ಬಗ್ಗೆಯೂ ತನಿಖೆ ಮಾಡಿಸಿ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಕೆಲಸ ಮಾಡಲಿ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular