ತುಮಕೂರು: ಜಿಲ್ಲೆಯಲ್ಲಿ ಬಿಜೆಪಿಯಿಂದ ಯಾರಾದರೂ ಕಾಂಗ್ರೆಸ್ ಗೆ ಬರ್ತಾರಾ ಎಂಬ ಪ್ರಶ್ನೆಗೆ ತುಮಕೂರಿನಲ್ಲಿ ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಪ್ರತಿಕ್ರಿಯಿಸಿ ಅದೆಲ್ಲಾ ಹೇಳೋಕೆ ಆಗುತ್ತಾ.ಸುರೇಶ್ ಗೌಡ, ಬಸವರಾಜು, ಜ್ಯೋತಿ ಗಣೇಶ್ ನಮ್ಮ ಜೊತೆ ಕಾಣಿಸಿಕೊಳ್ತಾರೆ.ಅನ್ನೋ ಕಾರಣಕ್ಕೆ ಕಾಂಗ್ರೆಸ್ ಗೆ ಬರ್ತಾರೆ ಅಂತ ಊಹೆ ಮಾಡೋಕೆ ಆಗುತ್ತಾ.ಅದೆಲ್ಲಾ ಇಲ್ಲ, ನೋಡಿ ರಾಜಕೀಯ ನಿಂತ ನೀರಲ್ಲ.ನಾಳೆ ಬೆಳಗ್ಗೆ ನಾನು ದಳಕ್ಕೆ ಹೋಗ್ಬೇಕು ಅಂತ ಯೋಚನೆ ಮಾಡ್ತಿದಿನಿ.ನೀವು ಅದನ್ನೆಲ್ಲಾ ಜೋರಾಗಿ ಹಾಕಿ. ಯಾವ ಬಾಂಬೆನೂ ಇಲ್ಲ.. ಯಾವ ಬಾಯ್ಸ್ ಇಲ್ಲ..ಎಲ್ಲಾ ಅವರರವರ ಪಾರ್ಟಿಯಲ್ಲಿ ಆರಾಮಾಗಿ ಇದ್ದಾರೆ ಎಂದು ಉತ್ತರ ನೀಡಿದರು. ನಂತರ ಬಿಜೆಪಿ ಕಾವೇರಿ ನೀರಿನ ವಿವಾದವನ್ನು ಅಸ್ತ್ರ ಮಾಡಿಕೊಳ್ಳುತ್ತಿರುವ ವಿಚಾರವಾಗಿ ಮಾತನಾಡಿ ಅದನ್ನೆಲ್ಲ ಕಾವೇರಿ ಅಥಾರಿಟಿ ನೋಡಿಕೊಳ್ಳುತ್ತೆ, ತಮಿಳುನಾಡಿನವರು ಸುಪ್ರೀಂ ಕೋರ್ಟ್ ಗೆ ಹೋಗಿದ್ದಾರೆ. ನಾವು ಕೂಡಾ ಕೋರ್ಟ್ ಗೆ ಹೋಗೋಕೆ ತಯಾರಿ ನಡೆಸುತ್ತಿದ್ದೇವೆ. ಮೇಕೆದಾಟು ವಿಚಾರದಲ್ಲಿ ನಮ್ಮ ನಿಲುವು ಯಾವುದೇ ಕಾರಣಕ್ಕೂ ಬದಲಾಗಲ್ಲ ಎಂದರು.
ಪರಮೇಶ್ವರ್ ಸಿಎಂ ಆಗ್ಬೇಕು ಎಂದು ಹೇಳಿಕೆ ವಿಚಾರವಾಗಿ ,ಅವರಿಗೆ ಸಿಎಂ ಆಗುವ ಅರ್ಹತೆ ಇಲ್ವಾ.ಆಂತರಿಕವಾಗಿ ಅಲ್ಲ ಬಹಿರಂಗವಾಗಿಯೇ ಚರ್ಚೆ ಆಯ್ತಲ್ವಾ.ಈ ಅವಧಿಗೋ… ಇನ್ನೊಂದು ಅವಧಿಗೋ.ಈ ಅವಧಿಯಲ್ಲಿ ಅವರು ಸಿಎಂ ಆಗ್ಬೆಕು ಅಂತ ನಾವು ಬಯಸ್ತಿವಪ್ಪ. ನಾವು ಬಯಸಿದ್ದೆಲ್ಲಾ ಸುಸೂತ್ರವಾಗಿ ಆಗಲಿ ಅಂತ ನೀವು ಸಹಕಾರ ಕೊಡಿ ಎಂದು ಪ್ರತಿಕ್ರಿಯಿಸಿದ್ದಾರೆ. ನಿಮಗೆ ಮುಖ್ಯಮಂತ್ರಿ ಆಗ್ಬೆಕು ಎಂಬ ಆಸೆಯಿದೆಯಾ ಅನ್ನೋ ಪ್ರಶ್ನೆಗೆ ಉತ್ತರ ನೀಡಿದ ಕೆ.ಎನ್ ರಾಜಣ್ಣ ನೋಡಪ್ಪ ನಮ್ಮ ಜೀವಮಾನದಲ್ಲಿ ಇಲ್ಲಿಯವರೆಗೆ ಬಂದಿರೋದೆ ದೊಡ್ಡದು.ಯಾವ ದುಡ್ಡಿಲ್ಲ ಯಾವ ಜಾತಿಯಿಲ್ಲ.ನೋ ಕ್ಯಾಶ್.. ನೋ ಕ್ಯಾಸ್ಟ್ .. ಇಲ್ಲಿ ತನಕ ಬಂದಿದ್ದೀನಿ. ನಾನು ಶಾಸಕ ಆಗ್ತಿನಿ ಅಂತ ಅನ್ಕೊಂಡಿರಲಿಲ್ಲ. ಪಟ್ಟಣ ಪಂಚಾಯ್ತಿ ಚೇರ್ಮನ್ ಆಗ್ಬೇಕು ಅಂತಾ ರಾಜಕೀಯಕ್ಕೆ ಬಂದೆ. ಆ ಮೇಲೆ ಅದೊಂದು, ಇದೊಂದು ಅಂತ ಇಲ್ಲಿ ತನಕ ಬಂದಿದಿನಿ ಎಂದು ತಿಳಿಸಿದರು.