ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಶಾಸಕ ಡಿ.ರವಿಶಂಕರ್ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಜೊತೆಗೆ ಸರ್ಕಾರಿ ಕಾರ್ಯಕ್ರಮದಲ್ಲಿ ಅವರ ಪತ್ನಿ ಹಾಗೂ ತಂದೆ ಭಾಗವಹಿಸುತ್ತಿದ್ದು ಮತ್ತು ತಾಲ್ಲೂಕಿನ ಇಲಾಖಾಧಿಕಾಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಕಿಡಿಕಾರಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಮಾಜಿ ಶಾಸಕ ಸಾ.ರಾ.ಮಹೇಶ್ ೧೫ ವರ್ಷಗಳ ಆಡಳಿತಾವಧಿಯಲ್ಲಿ ಮಾಡಿರುವಂತಹ ಕಾಮಗಾರಿಗಳಿಗೆ ಮತ್ತೆ ಭೂಮಿ ಪೂಜೆ ಮಾಡಿ ನಾನು ಅನುದಾನ ತಂದಿದ್ದೇನೆ ಎಂದು ಬಿಂಬಿಸುತ್ತಿರುವುದು ಇದು ಎಷ್ಟು ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಶ್ರೀ ಮೀನಾಕ್ಷಮ್ಮ ದೇವಸ್ಥಾನ ಗೋಪುರ ಕಾಮಗಾರಿ ಇನ್ನು ಮುಗಿದಿಲ್ಲ ಆಗಲೆ ಗೋಪುರ ಪ್ರತಿಷ್ಟಾಪನೆ ಎಂದು ಉದ್ಘಾಟನೆ ಮಾಡಿದ್ದಾರೆ. ಆದರೆ ಅನುದಾನ ತಂದಿದ್ದು ಸಾ.ರಾ.ಮಹೇಶ್ ಅವರ ಹೆಸರನ್ನೆ ಹಾಕಿಲ್ಲ ಮತ್ತು ಪುರಸಭೆ ಚುನಾಯಿತ ಸದಸ್ಯರನ್ನು ಆಹ್ವಾನ ನೀಡದೇ ಏಕ ಪಕ್ಷೀಯ ನಿರ್ಧಾರ ತೆಗೆದು ಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದರು.
ಮಾಜಿ ಶಾಸಕರಾದ ಸಾ.ರಾ.ಮಹೇಶ್ ಅವರು ಶಾಸಕರಾಗಿದ್ದ ವೇಳೆ ಯಾವುದೇ ಜಾತಿ – ಭೇದವಿಲ್ಲದೆ ಹೊರ ಗುತ್ತಿಗೆಆಧಾರದ ಮೇಲೆ ಕೆಲವರಿಗೆ ಕೆಲವು ಇಲಾಖೆಯಲ್ಲಿ ಕೆಲಸ ಕೊಡಿಸಿದ್ದರು, ಆದರೆ ಇವರು ಅವರೆಲ್ಲರನ್ನು ತೆಗೆದು ಇವರ ಬೆಂಬಲಿಗರಿಗೆಆದ್ಯತೆ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಕ್ಷೇತ್ರದ ಶಾಸಕ ಎಂದ ಮೇಲೆ ಮತ ಹಾಕಲಿ- ಬಿಡಲಿ ಎಲ್ಲಾರಿಗೂ ಶಾಸಕರಲ್ಲವೇ. ನೀವು ಅನುದಾನ ತಂದು ಭೂಮಿ ಪೂಜೆ, ಉದ್ಘಾಟನೆ ಮಾಡಿ ಸ್ವಾಮಿ ನಮ್ಮ ಅಭ್ಯಂತರವಿಲ್ಲ. ನಮ್ಮ ಮಾಜಿ ಶಾಸಕರು ತಂದ ಅನುದಾನಕ್ಕೆ ಗುದ್ದಲಿ ಪೂಜೆ ಮಾಡಿದ್ದಾರೆ ಮತ್ತೇ ನಿವೇಕೆ ಮಾಡುತ್ತಿರಾ ಎಂದು ಪ್ರಶ್ನೆ ಮಾಡಿದರು..
ಪುರಸಭೆ ವ್ಯಾಪ್ತಿಯಲ್ಲಿ ಚುನಾಯಿತರಾಗಿರುವ ವ್ಯಕ್ತಿ ಯಾವುದೇ ಪಕ್ಷದವಾನಾಗಿರಲಿ ಆಲ್ಲಿಯ ಕಾರ್ಯಕ್ರಮಕ್ಕೆ ಕರೆಯಬೇಕು. ನೀವು ಏಕಾ ಪಕ್ಷೀಯವಾಗಿ ನೀವೇ ಎಲ್ಲಾ ಮಾಡಿದರೆ ನಾವು ಏಕೆ ಗೆದ್ದಿರೋದು ಎಂದು ಪುರಸಭೆ ಸದಸ್ಯ ಉಮೇಶ್ ಶಾಸಕ ಡಿ.ರವಿಶಂಕರ್ ವಿರುದ್ದ ವಾಕ್ಸಮರ ನಡೆಸಿದರು .
ಶಾಸಕರು ತಿದ್ದುಕೊಳ್ಳಬೇಕು ಇಲ್ಲದಿದ್ದರೆ ಜೆಡಿಎಸ್ ಪಕ್ಷದಿಂದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಪತ್ರಿಕಾಗೊಷ್ಠಿಯಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹಂಪಾಪುರಕುಮಾರ್, ಪುರಸಭೆ ಸದಸ್ಯ ಸಂತೋಷ್, ಜಗದೀಶ್. ಉಮೇಶ್ ಉಪಸ್ಥಿತರಿದ್ದರು.