ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಜನತಂತ್ರ ವ್ಯವಸ್ಥೆಯಲ್ಲಿ ರಾಜಕಾರಣದ ಧೃವೀಕರಣವಾಗ ಬೇಕಿದೆ, ಅದು ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಿಂದಲೇ ಪ್ರಾರಂಬಿಸಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ತಿಳಿಸಿದರು.
ಅವರು ಕೆ.ಆರ್.ನಗರ ಪಟ್ಟಣದ ಶ್ರೀ ಕೃಷ್ಣ ಮಂದಿರದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅವರು ಕರೆಯಲಾಗಿದ್ದ ಸ್ನೇಹಿತರ ಸಭೆಯಲ್ಲಿ ಮಾತನಾಡಿದರು. ಪ್ರಾಮಾಣಿಕರಿಗೆ ಹಾಗೂ ರಾಜಕೀಯ ಹೋರಾಟಗಾರರಿಗೆ ರಾಜಕೀಯ ಹಿನ್ನಡೆಯಾಗುತ್ತಿದೆ, ಹಾಗೇ ಆಗಬಾರದು, ಹಿಂದಿನ ಚುನಾವಣೆಗೂ ಈಗಿನ ಚುನಾವಣೆಗೂ ಬಹಳಷ್ಟು ವ್ಯತ್ಯಾಸವಾಗಿದೆ,ಮತದಾರ ಎಲ್ಲೋ ಒಂದು ಕಡೆ ಮಾರಾಟವಾಗ ಬಾರದು, ವಸ್ತ ಸ್ಥಿತಿ ಅರಿತು ಮತಸಂತೆ ಪುಸ್ತಕ ಬರದೆ ಎಂದರು.
ರಾಜ್ಯದ ಉನ್ನತ ಸ್ಥಾನ ಎಂದರೆ ಮುಖ್ಯಮಂತ್ರಿ ಹುದ್ದೆ, ಆ ಹುದ್ದೆ ಆಲಂಕರಿಸುವ ವ್ಯಕ್ತಿ ಆರೋಪ ಪ್ರತ್ಯಾರೋಪ ಮಾಡುವಾಗ ಕೀಳ ಮಟ್ಟದ ಭಾಷೆ ಉಪಯೋಗಿಸ ಬಾರದು, ಯಾರೇ ಆಗಲಿ ಹಿರಿಯ ರಾಜಕರಾಣಿ ಬಗ್ಗೆ ಹಗುರದ ಮಾತು ಬೇಡ, ದೇಶ ಕಂಡ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು, ಹುಡುಗಾಟಕ್ಕೂ ನಮ್ಮ ರಾಜ್ಯದಲ್ಲಿ ಯಾರಿಗೂ ಈ ಸ್ಥಾನ ಸಿಗಲ್ಲ, ನಾವುಗಳು ಹೆಮ್ಮೆ ಪಡಬೇಕು, ಅವರ ಮಗ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಇವರ ಬಗ್ಗೆ ಆರೋಪ ಮಾಡುವಾಗ ನಾಲಿಗೆಯಲ್ಲಿ ಹಿಡಿತ ಇಟ್ಟು ಕೊಂಡು ಮಾತನಾಡಲಿ ಎಂದ ಹೆಚ್.ವಿಶ್ವನಾಥ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದ ವಿರುದ್ದ ಗುಡುಗಿದರು.
ನಾನು ೪೦ ವರ್ಷ ಕಾಂಗ್ರೆಸ್ ಪಕ್ಷದಲ್ಲಿ ಇದ್ದವನು, ರಾಜಕೀಯ ಏಳುಬೀಳು ಕಂಡವನು, ಸೋತ್ತಿದ್ಸೇನೆ, ಗೆದ್ದೀದ್ದೇನೆ, ಸೋಲು ಗೆಲುವಿನ ಅಡಿಪಾಯ, ಹಾಗಾಗಿ ಜುಲೈ ೭ ಕ್ಕೆ ಯುರೋಪ್ ದೇಶದಲ್ಲಿ ನನ್ನದು ಮತ್ತೊಂದು ಪುಸ್ತಕ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಮೈಸೂರು ರಾಜಮನೆತನದವರನ್ನು ನಾವೆಲ್ಲರೂ ಒಗ್ಗಟಿನಿಂದ ಗೆಲ್ಲಿಸೋಣ, ಅದೇ ರೀತಿ ಮಣ್ಣಿನ ಮಗ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಪಕ್ಷಾತೀತವಾಗಿ ಗೆಲ್ಲಿಸಿ ಸಂಸತ್ ಗೆ ಕಳಿಸೋಣ , ಕುಮಾರಸ್ವಾಮಿ ಒಬ್ಬ ಪ್ರತಿಭಾವಂತ ರಾಜಕಾರಣಿ ಹಾಗು ಅನುಭವ ಹೊಂದಿರುವ ಜೊತೆಗೆ ಎರಡು ಬಾರಿ ಮುಖ್ಯಮಂತ್ರಿಯಾಗಿ ರಾಜ್ಯದ ಜನತೆಗೆ , ಸಾಕಷ್ಟು ಅಭಿವೃದ್ಧಿ, ರೈತರಿಗೆ ಸಾಲಮನ್ನಾ ಸೇರಿದಂತೆ ಅನೇಕ ರೀತಿಯ ಕೆಲಸವನ್ನು ಮಾಡಿದ್ದಾರೆ, ಇಂತಹವರು ಸಂಸತ್ ಪ್ರವೇಶ ಮಾಡಿದರೆ, ನರೇಂದ್ರ ಮೋದಿ ಸರ್ಕಾರದಲ್ಲಿ ಮಂತ್ರಿಯಾಗಲಿದ್ದಾರೆ ದೇಶಕ್ಕೆ, ರಾಜ್ಯದ ಜನರಿಗೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಲಿದ್ದಾರೆ, ಆದರೆ ಒಬ್ಬ ಗುತ್ತಿಗೆದಾರ( ಕಂಟ್ರಾಕ್ಟರ್) ಹೋದರೆ ಯಾವ ಪರಿಸ್ಥಿತಿ ಬರುತ್ತದೆ ನೀವೆ ಚಿಂತನೆ ಮಾಡಿ ಎಂದು ನೆರದಿದ್ದ ಸ್ನೇಹಿತರನ್ನು ಪ್ರಶ್ನೆ ಮಾಡಿದರು.
ಸಭೆಗೆ ಅಡಗೂರು ಹೆಚ್. ವಿಶ್ವನಾಥ್ ಸ್ನೇಹಿತರಾಗಿ ಆಗಮಿಸಿದ್ದವರು ಇದು ಒಳ್ಳಯ ಬೆಳವಣಿಗೆ, ವಿಶ್ವನಾಥ್ ಅವರು ೧೯೯೨ ರಲಿ ಸಚಿವರಾಗಿನಿಂದ ೨೦೦೪ ವರಗೆ ಕೆ.ಆರ್.ನಗರ ಕ್ಷೇತ್ರಕ್ಕೆ ಉತ್ತಮ ರಾಜಕೀಯ ಹೆಸರು, ಕೀರ್ತಿ ತಂದವರು, ನೊಂದವರ, ಬಡವರ,ಶೋಷಿತರ ಪರವಾಗಿ ಅಭಿವೃದ್ಧಿ ಕಾರ್ಯಕ್ರಮ ಮಾಡಿ ಜನ ಮೆಚ್ಚುಗೆ ಪಡೆದವರು, ಬಿಸಿಯೂಟ, ಸ್ತ್ರೀ ಶಕ್ತಿ ಮಹಿಳಾ ಸಂಘಗಳ ಪ್ರಾರಂಬ ಆರ್ಥಿಕ ನೆರವು ಇದರೊಂದಿಗೆ ರಾಜ್ಯದ ಮಹಿಳೆಯರು ಆರ್ಥಿಕವಾಗಿ ಸದೃಡರಾದರು ಎಂಬ ಹೆಗ್ಗಳಿಕೆ ಪಾತ್ರರಾವರು ವಿಶ್ವನಾಥ್ ಎಂದು ಹಾಡಿಹೊಗಳಿದ ಸ್ನೇಹಿತರು. ಒಟ್ಟಾರೆಯಾಗಿ ಸಭೆಯಲ್ಲಿ ಸ್ನೇಹಿತರು ವಿಶ್ವನಾಥ್ ಅವರ ತೀರ್ಮಾನಕ್ಕೆ ಬದ್ದರಾಗಿ ಮೈಸೂರಿನ ರಾಜಮನೆತನದ ಯಧುವೀರ್ ಹಾಗೂ ಮಣ್ಣಿನ ಮಗ ಹೆಚ್‌ಡಿ. ಕುಮಾರಸ್ವಾಮಿ ಗೆಲುವಿಗೆ ಸಹಕರಿಸೋಣ ಎಂದು ನುಡಿದರು.
ಇಂದಿನ ರಾಜಕೀಯ ವ್ಯವಸ್ಥೆಗೂ ಹಿಂದಿನ ರಾಜಿ ವ್ಯವಸ್ಥೆಗೂ ಇರುವ ವ್ಯತ್ಯಾಸ, ದೇಶ, ರಾಜ್ಯದ ಚುನಾವಣೆ ನಡೆಯುತ್ತಿರುವಾಗ ಯಾವ ರೀತಿಯಲ್ಲಿ ಚುನಾವಣೆ ಎದರುರಿಸ ಬೇಕು, ಆರೋಪ, ಪ್ರತ್ಯಾರೋಪ ಮಾಡುವುದರಲ್ಲಿ ಕಾಲ ಕಳೆಯುವಂತಾಗಿದೆ, ಕ್ಷೇತ್ರ ಬಿಟ್ಟು ಪಕ್ಕದ ಕ್ಷೇತ್ರಕ್ಕೆ ಹೋಗಿ ಚುನಾವಣೆ ಎದರುಸಿದರೆ. ಇಂದಿರಾಗಾಂಧಿ ನಮ್ಮ ರಾಜ್ಯದಲ್ಲಿ ಚುನಾವಣೆ ಎದುರಿಸಿದ್ದರು, ಆ ಕಾಲದಲ್ಲಿ ಇಂತಹ ಪರಿಸ್ಥಿತಿ ಇತ್ತ, ಸಿದ್ದರಾಮಯ್ಯನವರು, ರಾಹುಲ್ ಗಾಂದಿ, ಕುಮಾರಸ್ವಾಮಿ ಸೇರಿ ಅನೇಕ ನಾಯಕರು ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಲ್ಲಿ ಚುನಾವಣೆ ಎದುರಿಸಿದರೆ, ಇದು ಕಾಂಗ್ರೆಸಿಗರಿಗೆ ಅರಿವಾಗಲಿ
-ಅಡಗೂರು ಹೆಚ್. ವಿಶ್ವನಾಥ್. ವಿಧಾನ ಪರಿಷತ್ ಸದಸ್ಯ
ಮೋಹನ್ ದಾಸ್ ಭಟ್, ಜಿ.ಪಂ.ಮಾಜಿ ಉಪಾಧ್ಯಕ್ಷ ಅಡಗೂರು ಚೆನ್ನಬಸಪ್ಪ, ತಾ.ಒಕ್ಕಲಿಗರ ಸಂಘದ ಅಧ್ಯಕ್ಷ ಮಿರ್ಲೆ ಅಣ್ಣೇಗೌಡ, ರಾಜ್ಯ ಜೆಡಿಎಸ್ ಪ್ರ,ಕಾರ್ಯದರ್ಶಿ ಚಂದ್ರಶೇಖರ್, ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಜಿ.ಪಂ.ಮಾಜಿ ಸದಸ್ಯ ಎಂ.ಟಿ.ಕುಮಾರ್, ಮೈಮುಲ್ ನಿರ್ಧೆಶಕ ಎ.ಟಿ.ಸೋಮಶೇಖರ್, ಪುರಸಭಾ ಮಾಜಿ ಅಧ್ಯಕ್ಷೆ ಭಾಗ್ಯಲಕ್ಷ್ಮಿ, ಮಾಜಿ ಸದಸ್ಯ ಡಿ.ಕಾಂತರಾಜು, ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದಾಕ್ಷಾಯಿಣಿ, ತಾ.ಪಂ.ಮಾಜಿ ಸದಸ್ಯ ಹಂಗರಬಾಯನಹಳ್ಳಿ ತಮ್ಮಣ್ಣ, ಪುರಸಭಾ ಸದಸ್ಯ ಕೆ.ಪಿ.ಪ್ರಭುಶಂಕರ್, ತಾ.ಜಾದಳ ವಕ್ತಾರ ಕೆ.ಎಲ್.ರಮೇಶ್, ಸಾಲಿಗ್ರಾಮ ತಾ.ಜಾದಳ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಮುಖಂಡರಾದ ಶಿವಾಜಿಗಣೇಶ್, ಕೃಷ್ಣಭಟ್, ನಿರ್ಮಿತಿ ಕೇಂದ್ರದ ನಿವೃತ್ತ ಎಇಇ ಮಿರ್ಲೆ ಮಂಜುನಾಥ್, ನಿವೃತ್ತ ಬಿಇಓ ರಾಮಲಿಂಗು, ಹಾಡ್ಯಕುಮಾರ್, ದಲಿತ ಮುಖಂಡ ಹನಸೋಗೆ ನಾಗರಾಜ್, ಅನೇಕ ಸ್ನೇಹಿತರು ಭಾಗವಹಿಸಿದ್ದರು.