Monday, April 21, 2025
Google search engine

Homeರಾಜ್ಯಸುದ್ದಿಜಾಲಹಗಲಿರುಳು ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಯಿಂದ ಮತದಾನ, ಸೆಲ್ಫಿಯಲ್ಲಿ ವಿಶ್ರಾಂತಿ

ಹಗಲಿರುಳು ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಯಿಂದ ಮತದಾನ, ಸೆಲ್ಫಿಯಲ್ಲಿ ವಿಶ್ರಾಂತಿ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಮತದಾನ ಮೇ 7 ರಂದು ನಡೆದಿದ್ದು ಮತದಾನದಲ್ಲಿ ಭಾಗವಹಿಸಿ ತಮ್ಮ ಹಕ್ಕು ಚಲಾಯಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ.

ಚುನಾವಣಾ ಸಿದ್ದತೆ ಎಂಬುದು ಸುಧೀರ್ಘ ಪ್ರಕ್ರಿಯೆ, ಮತದಾರರ ನೊಂದಣಿ, ಪರಿಷ್ಕರಣೆ ಸೇರಿದಂತೆ ಪ್ರತಿನಿತ್ಯ ಕೆಲಸ ಮಾಡಿದರು, ಮತ್ತಷ್ಟೆ ಉಳಿಯುತ್ತದೆ. ಚುನಾವಣಾ ನೇರ ಸಿದ್ದತೆಗಳಲ್ಲಿ ಭಾಗಿಯಾಗುವ ಚುನಾವಣಾ ಶಾಖೆ ಸಿಬ್ಬಂದಿಗಳು ಚುನಾವಣೆ ಸನಿಹ ಎರಡು, ಮೂರು ತಿಂಗಳ ಕಾಲ ಹಗಲಿರುಳು ಕರ್ತವ್ಯ ನಿರ್ವಹಿಸುವರು. ಈ ಸಿಬ್ಬಂದಿಗಳು ಚುನಾವಣಾ ಪರ್ವದಲ್ಲಿ ಭಾಗಿಯಾಗಿ ನನ್ನಮತ, ನನ್ನಹಕ್ಕು ಚಲಾಯಿಸುವ ಮೂಲಕ ಸೆಲ್ಫಿಯಲ್ಲಿ ಒಂದಾಗಿ ಸಂತೋಷ ಹಂಚಿಕೊಂಡಿದ್ದಾರೆ.

ಇವರು ಇವಿಎಂ ನೋಡಲ್ ಅಧಿಕಾರಿ ರಾಘವೇಂದ್ರ ಪ್ರಸಾದ್, ವಿಶೇಷಚೇತನರ ನೋಡಲ್ ಅಧಿಕಾರಿ ಡಾ.ಪ್ರಕಾಶ್, ಚುನಾವಣಾ ತಹಶೀಲ್ದಾರ್ ಕಾರಗಿ, ಚುನಾವಣಾ ಶಾಖೆ ಶಿರಸ್ತೇದಾರ್ ಉಪೇಂದ್ರ ಕುಮಾರ್, ವಿಷಯ ನಿರ್ವಾಹಕರಾದ ಲಕ್ಷ್ಮೀಕಾಂತ್, ಪುನೀತ್ ಕುಮಾರ್, ರಘು, ಚುನಾವಣಾ ತಾಂತ್ರಿಕ ಸಹಾಯಕ ಸುನೀಲ್ ಇದ್ದಾರೆ.

RELATED ARTICLES
- Advertisment -
Google search engine

Most Popular