Sunday, April 20, 2025
Google search engine

Homeರಾಜ್ಯರಾಜ್ಯದಲ್ಲಿ 2 ಹಂತದಲ್ಲಿ ಮತದಾನ: ಇಲ್ಲಿದೆ ಮಾಹಿತಿ

ರಾಜ್ಯದಲ್ಲಿ 2 ಹಂತದಲ್ಲಿ ಮತದಾನ: ಇಲ್ಲಿದೆ ಮಾಹಿತಿ

ನವದೆಹಲಿ: ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮುಂಬರುವ ಲೋಕಸಭೆ ಚುನಾವಣೆ ದಿನಾಂಕವನ್ನು ಶನಿವಾರ ಪ್ರಕಟಿಸಿದರು.

ದೇಶದಾದ್ಯಂತ 543 ಲೋಕಸಭಾ ಕ್ಷೇತ್ರಗಳಲ್ಲಿ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 19ರಂದು ಮೊದಲ ಹಂತದ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಕೂಡ ಇಂದಿನಿಂದಲೇ ಜಾರಿಗೆ ಬರಲಿದೆ.  

ಏಪ್ರಿಲ್ 26, ಮೇ 7ರಂದು ಮತದಾನ

ಕರ್ನಾಟಕದಲ್ಲಿ ಏಪ್ರಿಲ್ 26ರಂದು ಹಾಗೂ ಮೇ 7ರಂದು ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ, ಫಲಿತಾಂಶ ಪ್ರಕಟವಾಗಲಿದೆ.

ಏಪ್ರಿಲ್ 26ಕ್ಕೆ ಎಲ್ಲೆಲ್ಲಿ ಮತದಾನ?

ಚಿತ್ರದುರ್ಗ

ಉಡುಪಿ-ಚಿಕ್ಕಮಗಳೂರು

ದಕ್ಷಿಣ ಕನ್ನಡ

ಹಾಸನ

ತುಮಕೂರು

ಚಿಕ್ಕಬಳ್ಳಾಪುರ

ಕೋಲಾರ

ಮಂಡ್ಯ

ಮೈಸೂರು-ಕೊಡಗು

ಚಾಮರಾಜನಗರ

ಬೆಂಗಳೂರು ಗ್ರಾಮಾಂತರ

ಬೆಂಗಳೂರು ದಕ್ಷಿಣ

ಬೆಂಗಳೂರು ಉತ್ತರ

ಬೆಂಗಳೂರು ಕೇಂದ್ರ

ಮೇ 7ರಂದು ಎಲ್ಲೆಲ್ಲಿ ಮತದಾನ?

ಬೆಳಗಾವಿ

ಬಳ್ಳಾರಿ

ಚಿಕ್ಕೋಡಿ

ಹಾವೇರಿ-ಗದಗ

ಕಲಬುರಗಿ

ಬೀದರ್​

ಹುಬ್ಬಳಿ – ಧಾರವಾಡ

ಕೊಪ್ಪಳ

ರಾಯಚೂರು

ಉತ್ತರ ಕನ್ನಡ

ದಾವಣಗೆರೆ

ಶಿವಮೊಗ್ಗ

ಬಾಗಲಕೋಟೆ

ವಿಜಯಪುರ

RELATED ARTICLES
- Advertisment -
Google search engine

Most Popular