Monday, April 21, 2025
Google search engine

Homeರಾಜ್ಯವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿನ ಮತಯಾಚನೆ ಕಾರ್ಯಕ್ರಮ ಮುಕ್ತಾಯ

ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿನ ಮತಯಾಚನೆ ಕಾರ್ಯಕ್ರಮ ಮುಕ್ತಾಯ

ವಾರಣಾಸಿ: ವಾರಣಾಸಿ ಲೋಕಸಭಾ ಕ್ಷೇತ್ರ ದಕ್ಷಿಣ ಭಾರತದ ಎಲ್ಲಾ ಪ್ರತಿನಿಧಿಗಳು ಸುಮಾರು 15 ದಿನಗಳಿಂದ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡುವ ಕಾರ್ಯಕ್ರಮ ಇಲ್ಲಿಗೆ ಮುಕ್ತಾಯವಾಯಿತು.

ವಿಶೇಷವಾಗಿ ಕರ್ನಾಟಕ ದಿಂದ ಬಂದ ಪ್ರತಿನಿಧಿಗಳು, ತೆಲಂಗಾಣ,ತಮಿಳು ನಾಡು ಮಹಾರಾಷ್ಟ್ರ ಈ ಪ್ರದೇಶಗಳಿಂದ ಬಂದಂತ ಎಲ್ಲರೂ ಒಟ್ಟಾಗಿ ಸೇರುವಂತ ಅವಕಾಶ ಮತ್ತು ಇವರೆಲ್ಲರಿಗೂ ಕೂಡ  ಗೌರವಿಸುವಂತಹ ಒಂದು ಕಾರ್ಯಕ್ರಮವನ್ನು ಕಂಚಿ ಮಠದ ಆವರಣದಲ್ಲಿ ಆ ಯೋಜನೆ ಮಾಡಲಾಗಿತ್ತು.

ವಾರಣಾಸಿಯ ಕನ್ನಡದ ಬಳಗ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಎಸ್ ಎ ರಾಮದಾಸ್ ಮಹೇಶ್ ಟೆಂಗಿನಕಾಯಿ ಕೇಶವ್ ಪ್ರಸಾದ್ ನವೀನ್ ಹಾಗೂ ಆಂಧ್ರ ಪ್ರದೇಶದಿಂದ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ತಿರುಪತಿಯ ಬಿಜೆಪಿ  ಎಂ.ಪಿ.ಅಭ್ಯರ್ಥಿಯಾದ ವರಪ್ರಸಾದ್ ರಾವ್ ರವರು ತೆಲಂಗಾಣ ನಿವೃತ್ತ

ಡಿ.ಜಿ ಹಾಗೂ  ಎಂ.ಪಿ ಅಭ್ಯರ್ಥಿಯಾದ  ಕೃಷ್ಣಪ್ರಸಾದ್, ವೆಂಕಟೇಶ್ ಮೌರ್ಯ, ತಮಿಳುನಾಡಿನ ಹಿಂದು ಮಹಾಸಭಾದ ರಾಜ್ಯ ಅಧ್ಯಕ್ಷರಾದ ಅರ್ಜುನ್ ಸಂಪತ್ ಮಹಾರಾಷ್ಟ್ರದ ಅನಿಲ್ ಸಿಂಗ್ವಿ ಜಿ, ಮಾಜಿ ಶಾಸಕ ಚೋಳನ್ ಪಳನಿ ಶೆಟ್ಟಿ , ಮೊಹಮ್ಮದ್ ನಾಸಿರ್ ಜಿ ಇವರೆಲ್ಲರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಮುಖ್ಯವಾಗಿ ಕನ್ನಡ ಬಳಗದ ಬಾವು ಆಚಾರ್ಯ ತೊಪಾನಿ ಉತ್ತರಾದಿ ಮಠ, ರಾಜೇಶ್ ಕನ್ನಡ ಬಳಗದ ಕಾರ್ಯದರ್ಶಿ ಸುರೇಶ್ ಕನ್ನಡ ಬಳಗ, ಅನಿರುದ್ ಬೂತ ಅಧ್ಯಕ್ಷ ಕಿರಣ್ ಕುಮಾರ್ ಶಾಸ್ತ್ರಿ ಸೂರ್ಯ ಪ್ರಕಾಶ್ ಇವರುಗಳು ಕಾರ್ಯಕ್ರಮ ಆಯೋಜನೆ ಮಾಡಿದ್ದರು.

RELATED ARTICLES
- Advertisment -
Google search engine

Most Popular