ಮುಂಬಯಿ: ಹೃದಯಸ್ತಂಭನದಿಂದ ಖ್ಯಾತ ಕಿರುತೆರೆ ನಟ ರಿತುರಾಜ್ ಸಿಂಗ್(೫೯) ನಿಧನರಾಗಿದ್ದಾರೆ.
ಮಂಗಳವಾರ ತಡರಾತ್ರಿ ಅವರು ನಿಧನರಾಗಿದ್ದಾರೆ ಎಂದು ಅವರ ಸಹೋದ್ಯೋಗಿ ಮತ್ತು ಆತ್ಮೀಯ ಸ್ನೇಹಿತ ಅಮಿತ್ ಬೆಹ್ಲ್ ತಿಳಿಸಿದ್ದಾರೆ.
ಯಕೃತ್ತಿನ ಕಾಯಿಲೆಗೆ ತುತ್ತಾಗಿದ್ದ ಅವರನ್ನು ಇತ್ತೀಚೆಗಷ್ಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿಯಾಗಿದೆ. ರಿತುರಾಜ್ ಸಿಂಗ್ ಹಿಂದಿ ಟಿವಿ ಪ್ರದರ್ಶನಗಳು ಹಾಗೂ ಬಾಲಿವುಡ್ ಸಿನಿಮಾಗಳಲ್ಲಿನ ತಮ್ಮ ಪಾತ್ರಗಳಿಂದ ಮನೆ ಮಾತಾಗಿದ್ದರು. ಅವರು ಖ್ಯಾತ ಟಿವಿ ಪ್ರದರ್ಶನಗಳ ಪೈಕಿ ಬನೇಗಿ ಅಪ್ನಿ ಬಾತ್, ಹಿಟ್ಲರ್ ದೀದಿ, ಶಪಥ್, ದಿಯಾ ಔರ್ ಬಾತಿ ಹಮ್, ವಾರಿಯರ್ ಹೈ ಸೇರಿವೆ. ಟಿವಿ ಪ್ರದರ್ಶನವಾದ ಲಾಡೊ ೨ನಲ್ಲಿನ ಪಾತ್ರದಿಂದ ರಿತುರಾಜ್ ಸಿಂಗ್ ಭಾರಿ ಜನಪ್ರಿಯರಾಗಿದ್ದರು.