Friday, April 11, 2025
Google search engine

Homeಅಪರಾಧಪೋರ್ಷೆ ಕಾರು ಅಪಘಾತ: ಅಪ್ರಾಪ್ತನ ತಂದೆ, ಅಜ್ಜನಿಗೆ ಜಾಮೀನು ಮಂಜೂರು

ಪೋರ್ಷೆ ಕಾರು ಅಪಘಾತ: ಅಪ್ರಾಪ್ತನ ತಂದೆ, ಅಜ್ಜನಿಗೆ ಜಾಮೀನು ಮಂಜೂರು


ಪುಣೆ: ಪೋರ್ಷೆ ಅಪಘಾತ ಪ್ರಕರಣದಲ್ಲಿ ಬಾಲಾಪರಾಧಿಯನ್ನು ರಕ್ಷಿಸುವುದಕ್ಕಾಗಿ ಕುಟುಂಬದ ಕಾರು ಚಾಲಕನನ್ನು ಅಪಹರಿಸಿದ್ದ ಆರೋಪ ಎದುರಿಸುತ್ತಿರುವ ಬಾಲಕನ ತಂದೆ ಹಾಗೂ ಅಜ್ಜನಿಗೆ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ.

ಪುಣೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಬಾಲಾಪರಾಧಿಯ ತಂದೆ ಹಾಗೂ ಅಜ್ಜನನ್ನು ಅಪಹರಣ ಪ್ರಕರಣದಲ್ಲಿ ಮೇ ತಿಂಗಳಲ್ಲಿ ಬಂಧಿಸಲಾಗಿತ್ತು.

ಮೇ ೧೯ ರ ಮುಂಜಾನೆ ಪುಣೆಯ ಕಲ್ಯಾಣಿ ನಗರ ಪ್ರದೇಶದಲ್ಲಿ ೧೭ ವರ್ಷದ ಬಾಲಕ ಕುಡಿದ ಮತ್ತಿನಲ್ಲಿ ಚಲಾಯಿಸುತ್ತಿದ್ದ ಪೋರ್ಷೆ ಕಾರು ಇಬ್ಬರು ಮೋಟಾರ್ ಬೈಕ್ ನಲ್ಲಿದ್ದ ಸಾಫ್ಟ್ ವೇರ್ ಇಂಜಿನಿಯರ್ ಗಳಿಗೆ ಡಿಕ್ಕಿ ಹೊಡೆದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು

RELATED ARTICLES
- Advertisment -
Google search engine

Most Popular