ವಿದ್ಯಾರ್ಥಿ ಪ್ರಣವ್ ಪಿ ವಿನಯ್ ಗೆ ಮೆಚ್ಚುಗೆ ವ್ಯಕ್ತ
ವರದಿ: ಸತೀಶ್ ಆರಾಧ್ಯ, ಪಿರಿಯಾಪಟ್ಟಣ
ಪಿರಿಯಾಪಟ್ಟಣ:ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ಆಯ್ಕೆಯಾಗಿರುವ ಯದುವೀರ್ ಒಡೆಯರ್ ಅವರ ಭಾವಚಿತ್ರವನ್ನು ಕ್ಯೂಬ್ಸ್ ನಲ್ಲಿ ಬಿಡಿಸುವ ಮೂಲಕ ವಿದ್ಯಾರ್ಥಿ ಪ್ರಣವ್ ಪಿ ವಿನಯ್ ನೂತನ ಸಂಸದರಿಗೆ ಶುಭಕೋರಿದ್ದಾರೆ.
ಮೈಸೂರಿನ ರಾಮಕೃಷ್ಣ ವಿದ್ಯಾ ಶಾಲೆಯಲ್ಲಿ ಓದುತ್ತಿರುವ ಹದಿಮೂರು ವರ್ಷದ ಪ್ರಣವ್ ಪಿ ವಿನಯ್ ಪಿರಿಯಾಪಟ್ಟಣದ ವಿನಯ್ ಮತ್ತು ಮೃದುಲ ದಂಪತಿ ಪುತ್ರರಾಗಿದ್ದು, ಕ್ಯೂಬ್ಸ್ ನಲ್ಲಿ ಚಿತ್ರ ಬಿಡಿಸುವ ಮೂಲಕ ಚಿಕ್ಕ ವಯಸ್ಸಿನಲ್ಲಿ ಸಾಧನೆ ತೋರಿದ್ದಾರೆ. ಈ ಹಿಂದೆ ನಡೆದಾಡುವ ದೇವರೆಂದು ಖ್ಯಾತಿ ಪಡೆದಿದ್ದ ಸಿದ್ದಗಂಗಾ ಮಠದ ಶ್ರೀ ಸಿದ್ದಗಂಗಾ ಸ್ವಾಮೀಜಿ, ಶ್ರೀರಾಮ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರ ಭಾವಚಿತ್ರವನ್ನು ಕ್ಯೂಬ್ಸ್ ನಲ್ಲಿ ಬಿಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು.
ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ನೂತನ ಸಂಸದರಾದ ಯದುವೀರ್ ಒಡೆಯರ್ ಅವರ ಭಾವಚಿತ್ರವನ್ನು 486 ಕ್ಯೂಬ್ ಬಳಸಿ ಬಿಡಿಸಿರುವುದು ವಿಶೇಷವಾಗಿದೆ. ಇವರ ಸಾಧನೆಗೆ ಸ್ಥಳೀಯರು ಮತ್ತು ಕುಟುಂಬ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವ