Saturday, April 19, 2025
Google search engine

Homeಸ್ಥಳೀಯಮನುಷ್ಯನ ಜೀವನದಲ್ಲಿ ಆತ್ಮಭಿಮಾನ, ಆತ್ಮಗೌರವ ಹೆಚ್ಚಿಸಿಕೊಳ್ಳಲು ಸಕಾರಾತ್ಮಕ ಶಕ್ತಿ ಸಹಾಯಕ - ಬ್ರಹ್ಮಕುಮಾರಿ ಬಿ. ಕೆ...

ಮನುಷ್ಯನ ಜೀವನದಲ್ಲಿ ಆತ್ಮಭಿಮಾನ, ಆತ್ಮಗೌರವ ಹೆಚ್ಚಿಸಿಕೊಳ್ಳಲು ಸಕಾರಾತ್ಮಕ ಶಕ್ತಿ ಸಹಾಯಕ – ಬ್ರಹ್ಮಕುಮಾರಿ ಬಿ. ಕೆ ಮಂಜುಳಾ

ಮೈಸೂರು:ಮೈಸೂರಿನ ಟಿ ಟಿ ಎಲ್ ಟ್ರಸ್ಟ್, ಟಿಟಿಎಲ್ ವಾಣಿಜ್ಯ ವ್ಯವಹಾರ ನಿರ್ವಹಣಾ ಕಾಲೇಜು, ಟಿಟಿಎಲ್ ಸ್ವತಂತ್ರ ಪದವಿ ಪೂರ್ವ ಕಾಲೇಜು ಮತ್ತು ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಐಕ್ಯೂಎ ಸಿ ಸಂಯುಕ್ತವಾಗಿ ಆಯೋಜಿಸಿದ್ದ ಸಕಾರಾತ್ಮಕತೆಯ ಶಕ್ತಿ ಎಂಬ, ಉಪನ್ಯಾಸ ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿಸ್ ಸೆಂಟರ್, ಸೆಂಟರ್ ಇನ್ ಚಾರ್ಜ್ ನ ಬ್ರಹ್ಮಕುಮಾರಿ ಬಿ ಕೆ ಮಂಜುಳಾ ಅವರು ಮಾತನಾಡಿದರು.

ಸಕಾರಾತ್ಮಕ ಶಕ್ತಿ ಹಾಗೂ ನಕಾರಾತ್ಮಕ ಶಕ್ತಿ ಎರಡು ನಮ್ಮಲ್ಲಿಯೇ ಇರುತ್ತದೆ. ಸಕಾರಾತ್ಮಕ ಚಿಂತನೆ ಎಂದರೆ ಒಳ್ಳೆಯ ಕೆಲಸ, ಪ್ರೀತಿ, ವಿಶ್ವಾಸ, ನಂಬಿಕೆ,ಒಳ್ಳೆಯತನ ಇವೆಲ್ಲವೂ ನಮ್ಮನ್ನು ಬೆಳಕಿನೆಡೆಗೆ ಕರೆದೊಯ್ಯುತ್ತದೆ. ಮನುಷ್ಯನೇ ಒಂದು ಶಕ್ತಿ ಎಲ್ಲರಲ್ಲಿಯೂ ಆ ಶಕ್ತಿ ಇರುತ್ತದೆ ಅದನ್ನು ಲೈಟ್ ಎಂಬ ಬೆಳಕಿನಿಂದ ನಾವು ಜಾಗೃತಗೊಳಿಸಬೇಕು, “ಲೈಟ್” ಎಂದರೆ ‘ಲೆಟ್ ಇಟ್ ಗೋ’ ಬೇಡವಾದ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬಾರದು ನಮ್ಮ ನಕಾರಾತ್ಮಕ ಚಿಂತನೆಗಳನ್ನ ತೆಗೆದು ಹಾಕಬೇಕು, ಪೂರ್ತಿಯಾಗಿ ಅದನ್ನು ಹೋಗಲಾಡಿಸಲು ಪ್ರಯತ್ನಿಸಬೇಕು.ನಮ್ಮ ಒಳ್ಳೆಯ ಅಭ್ಯಾಸಗಳು ಪ್ರೀತಿ-ವಿಶ್ವಾಸ, ಸಂತೋಷ, ನಂಬಿಕೆಯನ್ನು ಮುಂದುವರಿಸಬೇಕು ಹಾಗೂ ಯಾವುದಾದರೂ ಹೊಸ ವಿಷಯ ಅಥವಾ ಹೊಸದರ ಬಗ್ಗೆ ತಿಳಿಯುವ ಆಸಕ್ತಿಯನ್ನು ಹೊಂದಬೇಕು.

ನಾವು ಎಲ್ಲರಿಗೂ ಸಹಾಯ ಮಾಡಬೇಕು, ಪ್ರೀತಿ ಸಂತೋಷವನ್ನು ಹಂಚಬೇಕು.ಸಂತೋಷದಿಂದ ಆರೋಗ್ಯ , ಆರೋಗ್ಯವೇ ಭಾಗ್ಯ, ಆರೋಗ್ಯದಿಂದ ನಮಗೆ ಸಂಪತ್ತು ದೊರೆಯುತ್ತದೆ. ಈ ಎಲ್ಲಾ ವಿಚಾರಗಳನ್ನು ಪಾಲಿಸುವುದರಿಂದ ನಾವು ಪಾರದರ್ಶಕವಾಗಿರುತ್ತೇವೆ ಎಂಬುದರ ಬಗ್ಗೆ ದೀರ್ಘವಾದ ಪರಸ್ಪರ ಸಂವಾದ ಹಾಗೂ ಪ್ರಾಯೋಗಿಕ ಅನುಭವಗಳ ಮೂಲಕ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಉಪನ್ಯಾಸ ನೀಡಿದರು.

ಇದೇ ಸಂಧರ್ಭದಲ್ಲಿ ಹಿರಿಯ ಪ್ರಾಧ್ಯಾಪಕರಾದ ಪ್ರೊಫೆಸರ್ ಎನ್ಎಂ ರಾಮಚಂದ್ರಯ್ಯ ರವರು ಧ್ಯಾನ ಮತ್ತು ಸಮರ್ಪಣಾ ಭಾವವನ್ನು ವಿದ್ಯಾರ್ಥಿಗಳು ಹೊಂದಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನ ತಿಳಿಸುವುದರ ಮೂಲಕ ತಮ್ಮ ಜೀವನದ ಅನುಭವಗಳನ್ನು ಇದೇ ಸಂದರ್ಭದಲ್ಲಿ ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ.ಟಿ.ಎಲ್ ಪದವಿ ಕಾಲೇಜು ಪ್ರಾಂಶುಪಾಲರಾದ ಡಾ. ಬಿ ವಿ ಪ್ರಶಾಂತ್ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಮೈಸೂರಿನ ಕೆಎಂಪಿ ಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಆಗಮಿಸಿದ್ದರು.

ಟಿಟಿಎಲ್ ಕಾಲೇಜಿನ ಟ್ರಸ್ಟಿ ಶ್ರೀಮತಿ ಗೀತಾ ರಾಮದಾಸ್ , ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಎನ್.ಎಂ. ರಾಮಚಂದ್ರಯ್ಯ, ಬ್ರಹ್ಮಕುಮಾರಿಸ್ ಸರಸ್ವತಿಪುರಂ ಸೆಂಟರನ ಸುಮಿತ್ರ ಸ್ವಾಮಿ, ವಾಣಿಜ್ಯಶಾಸ್ತ್ರದ ವಿಭಾಗದ ಅಧಿಕಾರಿ ಡಾಕ್ಟರ್ ಆಶಾ, ಗ್ರಂಥ ಪಾಲಕರಾದ ಶ್ರೀಮತಿ ರಮ್ಯಶ್ರೀ ಎಸ್ ಹೆಚ್, ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಗಿರೀಶ ಹೆಚ್ ಆರ್, ಉಪನ್ಯಾಸಕರಾದ ಕರುಣ್ ಶರ್ಮ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular